Mysore
20
overcast clouds
Light
Dark

ಕರ್ನಾಟಕದ ಶಿಲ್ಪಿ ಗಣೇಶ್‌ ಭಟ್‌ ಕೆತ್ತಿದ್ದ ರಾಮಲಲ್ಲಾ ಮೂರ್ತಿ ಫೋಟೊ ಬಹಿರಂಗ

ಜನವರಿ 22ರಂದು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಇಟ್ಟು ಪ್ರಾಣಪ್ರತಿಷ್ಠಾಪನೆ ಮಾಡಲಾಗಿದೆ. ಮೈಸೂರು ಮೂಲದ ಶಿಲ್ಪಿ ಅರುಣ್‌ ಯೋಗಿರಾಜ್‌ ಈ ಮೂರ್ತಿಯನ್ನು ತಯಾರಿಸಿದ್ದರು ಎಂಬ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ.

ಇನ್ನು ರಾಮಮಂದಿರಕ್ಕಾಗಿ ರಾಮಲಲ್ಲಾ ಮೂರ್ತಿಗಳನ್ನು ಕೆತ್ತುವ ಕಾರ್ಯವನ್ನು ಮೂವರು ಶಿಲ್ಪಿಗಳಿಗೆ ವಹಿಸಲಾಗಿತ್ತು. ಈ ಪೈಕಿ ಅರುಣ್‌ ಯೋಗಿರಾಜ್‌ ಕೆತ್ತಿದ ಮೂರ್ತಿಯನ್ನು ಪ್ರಾಣಪ್ರತಿಷ್ಠಾಪನೆ ಮಾಡಲು ಆಯ್ಕೆ ಮಾಡಲಾಗಿತ್ತು. ಹಾಗಿದ್ದರೆ ಇನ್ನುಳಿದ ಎರಡು ಮೂರ್ತಿಗಳು ಎಲ್ಲಿ ಎಂಬ ಪ್ರಶ್ನೆ ಹಾಗೂ ಕುತೂಹಲ ಜನರಲ್ಲಿ ಮೂಡಿತ್ತು.

ಈ ಎರಡು ವಿಗ್ರಹಗಳ ಪೈಕಿ ನಿನ್ನೆ ( ಜನವರಿ 23 ) ರಾಜಸ್ಥಾನದ ಜೈಪುರ ನಿವಾಸಿ ಸತ್ಯನಾರಾಯಣ ಪಾಂಡೆ ತಯಾರಿಸಿದ್ದ ರಾಮಲಲ್ಲಾ ಮೂರ್ತಿಯ ಫೋಟೊ ಹೊರಬಿದ್ದಿತ್ತು. ಇದೀಗ ಕರ್ನಾಟಕ ಮೂಲದ ಮತ್ತೋರ್ವ ಶಿಲ್ಪಿ ಗಣೇಶ್‌ ಭಟ್‌ ತಯಾರಿಸಿದ್ದ ರಾಮಲಲ್ಲಾ ಮೂರ್ತಿಯ ಫೋಟೊ ಸಹ ಹೊರಬಿದ್ದಿದೆ. ಈ ವಿಗ್ರಹದಲ್ಲಿ ರಾಮನ ಕಿರೀಟದಲ್ಲಿ ಸೂರ್ಯದೇವ ಹಾಗೂ ಸೂರ್ಯಚಕ್ರವಿದ್ದು, ವಿಗ್ರಹದ ಮೇಲೆ ಸಿಂಹದ ಲಲಾಟವನ್ನು ಕಾಣಬಹುದಾಗಿದೆ.

ಇನ್ನು ಈ ರಾಮಲಲ್ಲಾ ಮೂರ್ತಿ ಏಕಶಿಲಾ ಮೂರ್ತಿಯಾಗಿದ್ದು ಬಿಲ್ಲು ಹಾಗೂ ಬಾಣವನ್ನೂ ಸಹ ಒಳಗೊಂಡಿದೆ. ವಾಲ್ಮೀಕಿ ರಾಮಾಯಣದ ಪ್ರಕಾರ ಮುಖವನ್ನು ಕೆತ್ತಲಾಗಿದ್ದು, ಹೊಟ್ಟೆ ಮೃದುತ್ವವನ್ನು ಹೊಂದಿದೆ ಹಾಗೂ ಕಮಲದಳ ಪೀಠವಿದೆ. ಹೊಯ್ಸಳ ಶೈಲಿಯಲ್ಲಿದ್ದು ವಿಗ್ರಹದ ಪಕ್ಕದಲ್ಲಿ ಬ್ರಹ್ಮ, ಲಕ್ಷ್ಮಿ, ಹನುಮಂತ ಹಾಗೂ ಗರುಡ ದೇವರ ಕೆತ್ತನೆಗಳಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ