ಮೈಸೂರು : ಕೆಲ ದಿನಗಳ ಹಿಂದೆ ನೂತನ ಸಂಸತ್ ಭವನಕ್ಕೆ ನುಗ್ಗಿದ ಕಿಡಿಗೇಡಿಗಳು ನಡೆಸಿದ ದಾಂದಲೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಸಂಸತ್ ಪ್ರವೇಶಿಸಿದ್ದ ಪುಂಡರು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದಿದ್ದು ತಿಳಿದುಬಂದಿತ್ತು. ಇದೀಗ ಇದ್ದಕ್ಕೆ ಸ್ವತಃ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ದೇಶಪ್ರೇಮಿಯೋ ಅಥವ ದೇಶಭಕ್ತನೋ ಎಂಬುದು ಬೆಟ್ಟದ ಮೇಲಿರುವ ತಾಯಿ ಚಾಂಉಂಡೇಶ್ವರಿ, ಬ್ರಹ್ಮಗಿರಿಯಲ್ಲಿ ಕೂತಿರುವ ಕಾವೇರಿ ತಾಯಿ ತೀರ್ಮಾನ ಮಾಡುತ್ತಾರೆ.
ಅದಲ್ಲದೆ ಕಳೆದ 20ವರ್ಷದಿಂದ ನನ್ನ ಬರವಣಿಗೆಗಳನ್ನು ಓದಿಕೊಂಡು ಬಂದಿರುವ ಓದುಗ ಅಭಿಮಾನಿಗಳು ಹಾಗೂ ಕಳೆದ ಒಂಬತ್ತು ವರ್ಷಗಳಿಂದ ದೇಶ ಧರ್ಮ ರಾಷ್ಟ್ರೀಯತೆ ವಿಚಾರ ಬಂದಾಗ ನಾನು ನಡೆದುಕೊಂಡ ರೀತಿ ನೋಡಿರುವ ಕೊಡುಗು ಮೈಸೂರಿನ ಜನ 2024ರ ಲೋಕಸಭಾ ಚುನಾವಣೆಯಲ್ಲಿ ಮತದಾನದ ಮೂಲಕ ತೀರ್ಪು ನೀಡುತ್ತಾರೆ.
ಅಂತಿಮಾವಗಿ ತೀರ್ಮಾನ ಮಾಡಬೇಗಾಗಿರುವುದು ಜನ. ಹೀಗಾಗಿ ಅವರ ತೀರ್ಮಾನಕ್ಕೆ ನಾನು ಬಿಟ್ಟಿದ್ದೇನೆ ಎಂದು ತಿಳಿಸಿದರು