ಸಂಸತ್ ಭವನದಲ್ಲಿ ಕಿಡಿಗೇಡಿಗಳು ಹೊಗೆ ಡಬ್ಬಿ ದಾಳಿ ನಡೆಸಿದ್ದು ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಈ ಪ್ರಕರಣದ ಅಡಿಯಲ್ಲಿ ಈಗಾಗಲೇ ಒಟ್ಟು 6 ಮಂದಿಯನ್ನು ದೆಹಲಿ ಪೊಲೀಸ್ ವಿಶೇಷ ತನಿಖಾ ತಂಡ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ.
ಈ ವಿಚಾರಣೆಯಲ್ಲಿ ಹಲವು ಹೊಸ ಹೊಸ ಸುದ್ದಿಗಳು ಹೊರಬೀಳುತ್ತಿದ್ದು, ಇದೀಗ ಈ ಪೈಕಿ ಮೈಸೂರಿನ ಮನೋರಂಜನ್ ಜತೆ ಸಂಸತ್ ಒಳಗೆ ಹೊಗೆ ಡಬ್ಬಿ ದಾಳಿ ನಡೆಸಿದ್ದ ಸಾಗರ್ ಶರ್ಮಾ ತನಿಖೆ ವೇಳೆ ತಾನು ಸಂಸತ್ ಎದುರು ಬೆಂಕಿ ಹಚ್ಚಿಕೊಳ್ಳಲು ಯೋಜನೆ ಹಾಕಿದ್ದೆ ಎಂಬ ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾನೆ.
ಆನ್‌ಲೈನ್‌ನಲ್ಲಿ ಒಂದು ಜೆಲ್ ಸಿಗುತ್ತೆ, ಅದನ್ನು ಬಳಸಿದ್ದರೆ ಬೆಂಕಿಯಿಂದ ದೇಹಕ್ಕೆ ಹಾನಿಯಾಗುವುದಿಲ್ಲ, ಆದರೆ ಆನ್‌ಲೈನ್ ಪೇಮೆಂಟ್ ಕೆಲಸ ನಿರ್ವಹಿಸದ ಕಾರಣ ಅದನ್ನು ಖರೀದಿಸಲಾಗಲಿಲ್ಲ, ಹೀಗಾಗಿ ಆ ಯೋಜನೆಯನ್ನು ಕೈಬಿಟ್ಟೆವು ಎಂದು ಸಾಗರ್ ಶರ್ಮಾ ಹೇಳಿದ್ದಾರೆ.