ಒಡಿಶಾ ಹಾಗೂ ಜಾರ್ಖಂಡ್‌ನ ಬೌದ್ ಡಿಸ್ಟಲರೀಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಮೇಲೆ ನಿನ್ನೆ ( ಡಿಸೆಂಬರ್ 6 ) ದಾಳಿ ನಡೆಸಿದೆ. ಇನ್ನು ಈ ದಾಳಿಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಲಭಿಸಿದ ಪ್ರಮಾಣ ಎಷ್ಟಿದೆ ಎಂದರೆ ನೋಟು ಎಣಿಸುವ ಯಂತ್ರ ದೊರೆತ ನೋಟುಗಳನ್ನು ಪೂರ್ತಿಯಾಗಿ ಎಣಿಸಲಾಗದೇ ಅರ್ಧಕ್ಕೆ ನಿಂತುಹೋಗಿವೆ.
ಹೌದು, ನಿನ್ನೆ 50 ಕೋಟಿ ರೂಪಾಯಿಗಳಷ್ಟು ಹಣವನ್ನು ಎಣಿಸಿದ ನಂತರ ಹಣ ಎಣಿಕೆ ಯಂತ್ರ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಇನ್ನು ದಾಳಿಯಲ್ಲಿ 200 ಹಾಗೂ 500 ಮುಖಬೆಲೆಯ ನೋಟುಗಳೇ ಹೆಚ್ಚಿದ್ದು, ನೋಟುಗಳ ಪ್ರಮಾಣ ನೋಡಿ ಐಟಿ ಅಧಿಕಾರಿಗಳೂ ಸೇರಿದಂತೆ ಸಾರ್ವಜನಿಕರು ಆಶ್ಚರ್ಯಕ್ಕೊಳಗಾಗಿದ್ದಾರೆ.





