Mysore
24
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನ.೨೬ ಭಾರತೀಯರು ಮರೆಯಲಾಗದ ದಿನ :ನರೇಂದ್ರ ಮೋದಿ

ನವದೆಹಲಿ: ೨೦೦೮ ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಭಾರತಿಯರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದರೆ ಇಂದು ಆ ದಾಳಿಯಿಂದ ಭಾರತ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಲ್ಲದೆ ಭಾಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವ ಕೆಲಸದಲ್ಲಿ ನಿರತವಾಗಿದೆ ಅಂತಾ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ರು.

ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಮನ್‌ ಕಿ ಬಾತ್‌ನ ೧೦೭ ಕಾಯಕ್ರಮದಲ್ಲಿ ಮುಂಬೈ ದಾಳಿಯಲ್ಲಿ ಹುತಾತ್ಮರಾದ ಎಲ್ಲರಿಗೂ ಗೌರವ ಸಲ್ಲಿಸಿ ಮಾತಾನಡಿದ ಅವರು, ಈ ದಿನ ಭಾರತೀಯರು ಮರೆಯಲಾರದ ದಿನ. ಭಯೋತ್ಪಾದಕರು ಮುಂಬೈಮಾತ್ರವಲ್ಲದೇ ಇಡೀ ದೇಶವನ್ನು ಬಿಚ್ಚಿ ಬೀಳಿಸಿದ್ರು. ಇಂದು ಆ ದಾಳಿಂದ ಸಂಪೂರ್ಣ ಚೇತರಿಸಿಕೊಂಡಿದ್ದೇವೆ ಎಂದರು.

ಸತತ ೬೦ಗಂಟೆಗಳಕಾಲ ನಡೆದ ಭಾಯೋತ್ಪದಕರ ದಾಳಿಯಲ್ಲಿ ೧೮ಭದ್ರತಾ ಸಿಬ್ಬಂದಿ ಸೇರಿದಂತೆ ೧೬೬ ಮಂದಿ ಸಾವನ್ನಪ್ಪಿದ್ದರು. ಅವರೆಲ್ಲರಿಗೂ ಗೌರವ ಸಲ್ಲಿಸಬೇಕಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ದಿನದ ಶುಭಾಷಯಗಳು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ