Mysore
18
overcast clouds

Social Media

ಮಂಗಳವಾರ, 10 ಫೆಬ್ರವರಿ 2026
Light
Dark

ಬಜೆಟ್‌ ಅಧಿವೇಶನ: ಅಮಾನತ್ತಾಗಿದ್ದ ಸಂಸದರಿಗೆ ಮೋದಿ ವಾರ್ನಿಂಗ್‌

ಸಂಸತ್‌ನಲ್ಲಿ ಉಂಟಾಗಿದ್ದ ಭದ್ರತಾ ಲೋಪದ ವಿರುದ್ಧ ಪ್ರತಿಭಟನೆ ನಡೆಸಿ ಅಮಾನತ್ತಾಗಿದ್ದ 146 ಸಂಸದರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಾರ್ನಿಂಗ್ ನೀಡಿದ್ದಾರೆ. ಇಂದಿನಿಂದ ( ಜನವರಿ 31 ) ಬಜೆಟ್‌ ಅಧಿವೇಶನ ಆರಂಭಗೊಂಡಿದ್ದು, ಮೊದಲ ದಿನವೇ ಮೋದಿ ಅಮಾನತ್ತಾಗಿದ್ದ ಸಂಸದರಿಗೆ ಬುದ್ಧಿ ಮಾತನ್ನು ಹೇಳಿ ಎಚ್ಚರಿಕೆ ನೀಡಿದ್ದಾರೆ.

ಸಂಸತ್‌ಗೆ ಧನಾತ್ಮಕವಾಗಿ ಕೊಡುಗೆ ನೀಡಿದವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಹೊರತು ದಾಂಧಲೆ ನಡೆಸಿದವರನ್ನು ನೆನಪು ಮಾಡಿಕೊಳ್ಳುವುದು ಕಡಿಮೆ. ಹೀಗಾಗಿ ಈ ಬಾರಿಯ ಬಜೆಟ್‌ ಅಧಿವೇಶನದಲ್ಲಿ ಸಂಸದರಿಗೆ ಧನಾತ್ಮಕ ಹೆಜ್ಜೆ ಇಡಲು ಅವಕಾಶ ಸಿಕ್ಕಿದೆ. ಅದನ್ನು ಅತ್ಯುತ್ತಮವಾಗಿ ಹಾಗೂ ಧನಾತ್ಮಕವಾಗಿ ಬಳಸಿಕೊಳ್ಳಬೇಕು, ಕೈಚೆಲ್ಲಬಾರದು ಎಂದು ಕರೆ ನೀಡಿದ್ದಾರೆ.

ಸಂಸದೀಯ ಮೌಲ್ಯಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಭಗ್ನಗೊಳಿಸುವ ಹವ್ಯಾಸ ಇರುವ ಸಂಸದರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಸಂಸತ್‌ ಅವಧಿಯಲ್ಲಿ ತಾವು ಏನೆಲ್ಲಾ ಮಾಡಿದ್ದೇವೆ ಎಂಬುದರ ಸಿಂಹಾವಲೋಕನ ಮಾಡಿಕೊಳ್ಳಬೇಕು ಎಂದೂ ಸಹ ಪ್ರಧಾನಮಂತ್ರಿ ಹೇಳಿಕೆ ನೀಡಿದ್ದಾರೆ.

ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಕುರಿತು ಮಾತನಾಡಿದ ಮೋದಿ ಬಜೆಟ್‌ ಅಧಿವೇಶನ ಪ್ರಾರಂಭವಾದಾಗ ಮುರ್ಮು ಅವರ ಮಾರ್ಗದರ್ಶನ ಹಾಗೂ ನಾಳೆ ನಿರ್ಮಲಾ ಸೀತಾರಾಮನ್‌ ಮಧ್ಯಂತರ ಬಜೆಟ್‌ ಮಂಡಿಸುವಾಗ ಒಂದು ರೀತಿಯಲ್ಲಿ ಇದು ನಾರಿ ಶಕ್ತಿಯ ಹಬ್ಬವಾಗಲಿದೆ ಎಂದು ಬಣ್ಣಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!