Mysore
23
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಭಾರತದ ಇತಿಹಾಸದಲ್ಲೇ ಮೋದಿ ಅತ್ಯಂತ ಯಶಸ್ವಿ ಪ್ರಧಾನಿ: ಮುಕೇಶ್‌ ಅಂಬಾನಿ

ಉದ್ಯಮಿ ಮುಕೇಶ್‌ ಅಂಬಾನಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗುಣಗಾನ ಮಾಡಿದ್ದಾರೆ. ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ ವೈಬ್ರೆಂಟ್‌ ಗುಜರಾತ್‌ ಜಾಗತಿಕ ಶೃಂಗಸಭೆಯಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ಭಾರತ ದೇಶದ ಅತ್ಯಂತ ಯಶಸ್ವಿ ಪ್ರಧಾನಿ ಎಂದು ಹೊಗಳಿದ್ದಾರೆ.

ಅಲ್ಲದೇ ಈ ಕಾಲದ ಶ್ರೇಷ್ಠ ಜಾಗತಿಕ ನಾಯಕರಾಗಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ ಎಂದೂ ಸಹ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ. ವೈಬ್ರೆಂಟ್‌ ಗುಜರಾತ್‌ ಸಮ್ಮಿಟ್‌ 20 ವರ್ಷ ಕಾಲ ಮುಂದುವರಿಯಲು ಅವರೇ ಕಾರಣ, ಗುಜರಾತ್‌ ಹೊಂದಿರುವ ಬೆಳವಣಿಗೆಗೂ ಸಹ ಮೋದಿ ಅವರೇ ಕಾರಣ ಎಂದು ಮುಕೇಶ್‌ ಅಂಬಾನಿ ಹೇಳಿಕೆ ನೀಡಿದ್ದಾರೆ.

“ಈ ರೀತಿಯ ಬೇರೆ ಯಾವುದೇ ಶೃಂಗಸಭೆ ಕೂಡ ಸುದೀರ್ಘ 20 ವರ್ಷ ಕಾಲ ಬಲವೃದ್ಧಿ ಕಾಣುತ್ತಾ ಮುಂದುವರಿಯುತ್ತಿರುವ ಉದಾಹರಣೆಯೇ ಇಲ್ಲ. ನಮ್ಮ ಪ್ರಧಾನಿ ಶ್ರೀ ನರೇಂದ್ರಭಾಯ್ ಮೋದಿ ಅವರ ದೃಷ್ಟಿ ಮತ್ತು ಸ್ಥಿರತೆಗೆ ಇದು ನಿದರ್ಶನವಾಗಿದೆ” ಎಂದು ಮುಕೇಶ್‌ ಅಂಬಾನಿ ತಿಳಿಸಿದ್ದಾರೆ.

“ಭಾರತ 2047ರೊಳಗೆ 35 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗುವ ಹಾದಿಯಲ್ಲಿದೆ. ಜಗತ್ತಿನ ಯಾವ ಶಕ್ತಿಯೂ ಇದನ್ನು ನಿಲ್ಲಿಸಲು ಆಗುವುದಿಲ್ಲ. ಗುಜರಾತ್ ರಾಜ್ಯವೊಂದರ ಆರ್ಥಿಕತೆಯೇ 3 ಟ್ರಿಲಿಯನ್ ಡಾಲರ್​ನಷ್ಟು ಆಗುತ್ತದೆ” ಎಂದೂ ಸಹ ಮುಕೇಶ್‌ ಅಂಬಾನಿ ಭವಿಷ್ಯ ನುಡಿದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!