Mysore
17
broken clouds

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ಲಕ್ಷದ್ವೀಪದ ಸಮುದ್ರದಲ್ಲಿ ಸ್ನಾರ್ಕಲಿಂಗ್‌ ಮಾಡಿದ ನರೇಂದ್ರ ಮೋದಿ

ಎರಡು ದಿನಗಳ ಕಾಲ ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪ ಪ್ರವಾಸದಲ್ಲಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಈ ಪ್ರವಾಸದ ಕುರಿತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಚುನಾವಣೆ ಹಿನ್ನೆಲೆ ನರೇಂದ್ರ ಮೋದಿ ಈ ಪ್ರವಾಸವನ್ನು ಕೈಗೊಂಡಿದ್ದು, ಲಕ್ಷದ್ವೀಪಕ್ಕೆ 1150 ಕೋಟಿ ರೂಪಾಯಿಗಳ ಯೋಜನೆಯನ್ನೂ ಸಹ ಘೋಷಿಸಿದ್ದಾರೆ. ಬಳಿಕ ಲಕ್ಷದ್ವೀಪದ ಸಮುದ್ರ ತೀರದಲ್ಲಿ ತಿರುಗಾಡಿರುವ ಮೋದಿ ಸಮುದ್ರ ಸೌಂದರ್ಯವನ್ನು ಸವಿದಿದ್ದಾರೆ.

ಅಲ್ಲದೇ ನರೇಂದ್ರ ಮೋದಿ ಸ್ನಾರ್ಕಲಿಂಗ್‌ ಅನ್ನೂ ಸಹ ಮಾಡಿದ್ದಾರೆ. ಸ್ನಾರ್ಕಲ್‌ ಎಂಬ ಟ್ಯೂಬ್‌ ಮೂಲಕ ಉಸಿರಾಡುತ್ತಾ ಸಮುದ್ರದಾಳಕ್ಕೆ ಲೈಫ್‌ ಜಾಕೆಟ್‌ ಧರಿಸಿ ಇಳಿದು ಒಳಗಿನ ಸೌಂದರ್ಯವನ್ನು ಸವಿಯುವ ಪ್ರಕ್ರಿಯೆಗೆ ಸ್ನಾರ್ಕಲಿಂಗ್‌ ಎಂದು ಕರೆಯಲಾಗುತ್ತದೆ. ಈ ಸಾಹಸ ಮಾಡಿರುವ ಮೋದಿ ಕುರಿತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ವಯಸ್ಸಿನಲ್ಲೂ ಇಂತಹ ಚಟುವಟಿಕೆ ಮಾಡಿರುವುದಕ್ಕೆ ಭೇಷ್‌ ಎಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!