Mysore
16
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಮಿಜೋರಾಂ ಮತ ಏಣಿಕೆ :11 ಸ್ಥಾನಗಳಲ್ಲಿ ಝಡ್​ಪಿಎಂ ಆರಂಭಿಕ ಮುನ್ನಡೆ

ಮಿಜೋರಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, 11 ಸ್ಥಾನಗಳಲ್ಲಿ ಝಡ್​ಪಿಎಂ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.

ಎಕ್ಸಿಟ್ ಪೋಲ್ ಪ್ರಕಾರ ಕಳೆದ ಬಾರಿ 40 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಗೆದ್ದಿದ್ದ ಆಡಳಿತಾರೂಢ ಮಿಜೋ ನ್ಯಾಶನಲ್ ಫ್ರಂಟ್ ಈ ಬಾರಿ ಅರ್ಧದಷ್ಟನ್ನು ದಾಟಲು ಹೆಣಗಾಡುವುದಾಗಿ ಎಲ್ಲಾ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಅಂಚೆ ಮತಪತ್ರಗಳ ಲೆಕ್ಕಾಚಾರ ನಡೆಯುತ್ತಿದ್ದು, ಝಡ್​ಪಿಎಂ 11 ಸ್ಥಾನಗಳಲ್ಲಿ, ಮಿಜೋ ನ್ಯಾಷನಲ್ ಫ್ರಂಟ್ (MNF) 8 ಮತ್ತು ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬಾರಿ ಮಿಜೋ ನ್ಯಾಷನಲ್ ಫ್ರಂಟ್ (MNF), ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ.

ಮತ ಎಣಿಕೆಗೂ ಮುನ್ನ ಹೊರಬಿದ್ದ ಬಹುತೇಕ ಎಕ್ಸಿಟ್ ಪೋಲ್ ಗಳು ಯಾವುದೇ ಪಕ್ಷಕ್ಕೆ ಬಹುಮತ ನೀಡಿಲ್ಲ. ಎಬಿಪಿ-ಸಿ ವೋಟರ್ ಎಕ್ಸಿಟ್ ಪೋಲ್ ಪ್ರಕಾರ, ಎಂಎನ್‌ಪಿ 15 ರಿಂದ 21 ಸ್ಥಾನಗಳನ್ನು, ಕಾಂಗ್ರೆಸ್ 2 ರಿಂದ 8, ಜಿಪಿಎಂ 12 ರಿಂದ 18 ಮತ್ತು ಇತರರು 0 ರಿಂದ 5 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!