ಮಿಜೋರಾಂ ವಿಧಾನಸಭೆ ಚುನಾವಣೆ ಮತ ಎಣಿಕೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಆಡಳಿತಾರೂಢ ಎಂಎನ್‌ಎಫ್ ಪಕ್ಷ ಹಾಗೂ ವಿರೋಧ ಪಕ್ಷ ಜೆಡ್‌ಪಿಎಂ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಈಗಾಗಲೆ ವಿರೋಧಪಕ್ಷ ಜೆಡ್‌ಪಿಎಂ ಪಕ್ಷ ಹೆಚ್ಚಿನ ಮತಗಳನ್ನುಪಡೆದು ಮುನ್ನಡೆ ಸಾಧಿಸಿದ್ದು, ಆಡಳಿತಾರೂಡ ಪಕ್ಷವಾದ ಎಂಎನ್‌ಎಫ್ ಪಕ್ಷ ಎರಡನೇ ಸ್ಥಾನದಲ್ಲಿದೆ.
ನಿನ್ನೆ ನಾಲ್ಕು ರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು ಮೂರು ರಾಜ್ಯಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಇದೀಗ ಮಿಜೋರಂನ ಚುನಾವಣೆ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.
ರಾಜ್ಯಕ್ಕೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಆಡಳಿತಾರೂಢ ಎಂಎನ್‌ಎಫ್ ವಿಫಲವಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಮಾಡಿದೆ. ಇನ್ನು ವಿರೋಧಪಕ್ಷವಾದ ಜೋರಾಮ್ ಪೀಪಲ್ಸ್ ಪಾರ್ಟಿ ರಾಜ್ಯದಲ್ಲಿ ಹೊಸ ರೀತಿಯ ಆಡಳಿತ ವ್ಯವಸ್ಥೆ ತರುವುದಾಗಿ ಜನರಿಗೆ ವಿಶ್ವಾಸ ನೀಡಿದೆ.





