Mysore
27
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಅಡ್ವಾಣಿಗೆ ಭಾರತರತ್ನ ವಿರುದ್ಧ ಮೌಲಾನಾ ತೌಕೀರ್ ರಝಾ ಕಿಡಿ !

ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಘೋಷಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಇತ್ತೆಹಾದ್ ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮೌಲಾನಾ ತೌಕೀರ್ ರಝಾ ವಿಷ ಕಾರಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು, ಅಡ್ವಾಣಿಯವರಿಗೆ ಭಾರತ ರತ್ನ ನೀಡಿರುವುದರಿಂದ, ಆ ಪ್ರಶಸ್ತಿಗೆ ಮಾಡಿದ ಘೋರ ಅವಮಾನವಾಗಿದೆ. ಭಾಜಪದ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸುವ ಹಿನ್ನೆಲೆಯಲ್ಲಿ ಅವರು ಮೇಲಿನ ಹೇಳಿಕೆಗಳನ್ನು ನೀಡಿದ್ದಾರೆ.

ಭಾರತದಲ್ಲಿ ದ್ವೇಷ, ಅಪ್ರಾಮಾಣಿಕತೆ, ಅನ್ಯಾಯ ಮತ್ತು ನಿರುದ್ಯೋಗ ಹೆಚ್ಚಾಗಿದೆ. ಇದಕ್ಕೆ ಅಡ್ವಾಣಿ ಜವಾಬ್ದಾರರಾಗಿದ್ದಾರೆ. ಮುಸಲ್ಮಾನರಿಗೆ ದೇಶದಲ್ಲಿ ಮತಾಂಧತೆ ಮತ್ತು ಯುದ್ಧದ ವಾತಾವರಣ ಬೇಕಾಗಿಲ್ಲ.

ಮಸೀದಿಗಳನ್ನು ಕೆಡವಬೇಕು, ಮುಸ್ಲಿಮರನ್ನು ಕೊಲ್ಲಬೇಕು, ಅವರನ್ನು ಅವಮಾನಿಸಬೇಕು, ಅವರ ಹೆಣ್ಣುಮಕ್ಕಳ ದಾರಿ ತಪ್ಪಿಸಬೇಕು ಇದು ನಮಗೆ ಅಪೇಕ್ಷಿತವಿಲ್ಲ.

ಜಮಾತೆ ಇಸ್ಲಾಮಿ ಹಿಂದ’ನ ಕಾರ್ಯದರ್ಶಿ ಮಲಿಕ ಮೊಹತಸೀಮ ಖಾನ ಇವರೂ ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವುದನ್ನು ವಿರೋಧಿಸಿದ್ದಾರೆ. ಅವರು ಮಾತನಾಡಿ, ಈಗಿನ ಸರಕಾರದಿಂದ ಬಾಬ್ರಿ ಮಸೀದಿ ಧ್ವಂಸ ಮಾಡಿರುವ ಜನರನ್ನೇ ಗೌರವಿಸುತ್ತದೆ ಎಂದು ನಿರೀಕ್ಷಿಸಬಹುದು.

ಕೇಂದ್ರ ಸರಕಾರ ದ್ವೇಷದ ಆಧಾರದಲ್ಲಿ ರಾಜಕೀಯ ಮಾಡಲು ಬಯಸುತ್ತಿದೆ. ಯಾರಿಗೆ ಶಾಂತಿ ಬೇಡವಾಗಿದೆಯೋ, ಅಂತಹವರಿಗೆ ಈಗಿನ ಸರಕಾರ ಬಹುಮಾನ ನೀಡುತ್ತದೆ. ಸದ್ಯದ ಸರಕಾರ ಕಾನೂನು ಪ್ರಕಾರ ಕೆಲಸ ಮಾಡುತ್ತಿದೆಯೇ, ಎಂದು ದೇಶದ ಜನತೆ ವಿಚಾರ ಮಾಡಬೇಕು ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ