Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸಂಸತ್‌ ಭವನದಲ್ಲಿ ದುಷ್ಕೃತ್ಯ : ಮಾಸ್ಟರ್‌ ಮೈಂಡ್‌ ಆರೋಪಿ ಪೊಲೀಸ್‌ ಕಸ್ಟಡಿಗೆ

ನವದೆಹಲಿ: ಬುಧವಾರ ನೂತನ ಸಂಸತ್‌ ಭವನದಲ್ಲಿ ದುಷ್ಕೃತ್ಯವೆಸೆಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದ ಹಿಂದಿನ ಮಾಸ್ಟರ್‌ ಮೈಂಡ್‌ ಲಲಿತ್‌ ಝಾನನ್ನು ನಿನ್ನೆ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಇಂದು ನ್ಯಾಯಾಲಯದ ಮುಂದೆ ಲಲಿತ್‌ ಝಾನನ್ನು ಹಾಜರುಪಡಿಸಲಾಯಿತು. ಆರೋಪಿಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ ದೆಹಲಿಯ ಪಟಿಯಾಲ ನ್ಯಾಯಾಲಯಕ್ಕೆ ಒಪ್ಪಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಆತನನ್ನು ಪೊಲೀಸ್‌ ಕಸ್ಟಡಿಗೆ ನೀಡುವಂತೆ ಪೊಲೀಸ್‌ ಇಲಾಖೆ ಕೋರಿತ್ತು.

ಈ ಸಂಬಂಧ ಆರೋಪಿಯನ್ನು 7ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ