ನವದೆಹಲಿ: ನೂತನ ಸಂಸತ್ ಭವನದ ಮೇಲೆ ಬುಧವಾರ ಭದ್ರತಾ ಲೋಪದಿಂದಾಗಿ ಇಬ್ಬರು ಆರೋಪಿಗಳು ಗ್ಯಾಲರಿ ಒಳಗೆ ಪ್ರವೇಶ ಮಾಡಿ ಕಲರ್ ಗ್ಯಾಸ್ ಸೀಮಪಡನೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ 5ನೇ ಆರೋಪಿಯನ್ನು ಬಂಧಿಸಿಲಾಗಿದೆ.
ಎಲ್ಲಾ ಆರು ಆರೋಪಿಗಳು ಹಲವು ವರ್ಷದಿಂದ ಪರಸ್ಪರ ಪರಿಚಿತರಾಗಿದ್ದರು. ಅಲ್ಲದೇ ಕೆಲವು ತಿಂಗಳ ಹಿಂದೆಯೇ ಸಂಸತ್ ಮೇಲೆ ದಾಳಿ ಕುರಿತು ಯೋಜನೆ ರೂಪಿಸಿದ್ದರು ಎಂದು ತನಿಖಾ ವರದಿ ಮೂಲಕ ತಿಳಿದು ಬಂದಿದೆ.
ಅಲ್ಲದೇ ಆರೋಪಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂಪರ್ಕ ಹೊಂದಿದ್ದರು ಹಾಗೂ ಸಂಸತ್ ಭವನದಲ್ಲಿ ವಿಹಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
6ನೇ ಆರೋಪಿಗೆ ಹುಡುಕಾಟ:
ಸಂಸತ್ ಮೇಲೆ ದಾಳಿನಡೆಸುವ ಯೋಜನೆಯನ್ನು 6ನೇ ಆರೋಪಿಯಾದ ವಿಶಾಲ್ ಶರ್ಮ ಎಂಬಾತನ ಮನೆಯಲ್ಲಿ ಯೋಜನೆ ರೂಪಿಸಲಾಗಿತ್ತು. ಎಲ್ಲಾ ೫ ಆರೋಪಿಗಳಿಗೆ ವಿಶಾಲ್ ತನ್ನ ಮನೆಯಲ್ಲೆ ಆಶ್ರಯ ನೀಡಿದ್ದಾ ಎಂದು ತಿಳಿದುಬಂದಿದೆ. ಆದರೇ ಇದೀಗ ೫ ಆರೋಪಿಗಳನ್ನು ಬಂಧಿಸಿದು, 6ನೇ ಆರೋಪಿ ವಿಶಾಲ್ ನಾಪತ್ತೆಯಾಗಿದ್ದು ಆತನನ್ನು ಪತ್ತೆ ಮಾಡಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಬೇಸತ್ತು ಈ ಕೃತ್ಯಕ್ಕೆ ಮುಂದಾದೆವು:
ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ಯಾವುದಕ್ಕೂ ಸೂಕ್ತ ಹಾಗೂ ಸಂಪೂರ್ಣ ಪರಿಹಾರ ಸಿಕ್ಕಿಲ್ಲ. ಉದಾಹರಣೆಗೆ ರೈತರ ಪ್ರತಿಭಟಣೆ ಮಣಿಪುರ ಬಿಕ್ಕಟ್ಟು ಮತ್ತು ನಿರುದ್ಯೋಗದಂತಹ ಸಮಸ್ಯೆಗಳಿಂದ ನಾವೆಲ್ಲಾ ಬೇಸತ್ತಿದ್ದೇವೆ. ಇದರಿಂದಾಗಿ ನಾವು ಈ ಕೃತ್ಯವೆಸಗಲು ಮುಂದಾಗಿದ್ದೆವು ಎಂದು ವಿಚಾರಣೆ ಸಂದರ್ಭದಲ್ಲಿ ಆರೋಪಿ ಅಮೂಲ್ ವಿಚಾರಣಾಧಿಕಾರಿಗೆ ತಿಳಿಸಿದ್ದಾನೆ.



