ನವದೆಹಲಿ: ಇಲ್ಲಿನ ಜಂತರ್ ಮಂತರ್‌ನಲ್ಲಿ ಇಂದು ( ಫೆಬ್ರವರಿ 8 ) ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ಜರುಗುತ್ತಿದೆ. ತಮ್ಮ ರಾಜ್ಯಕ್ಕೆ ತೆರಿಗೆ ಹಂಚಿಕೆ ವಿಚಾರದಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿರುವ ಕೇರಳ ಪ್ರತಿಭಟನೆಗೆ ಇಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ʼಸಂಯುಕ್ತವ್ಯವಸ್ಥೆಯನ್ನು ಕಾಪಾಡಲು ಹೋರಾಟʼ ಎಂಬ ಹೆಸರಿನಡಿಯಲ್ಲಿ ಈ ಪ್ರತಿಭಟನೆ ಜರುಗುತ್ತಿದೆ.
ಇನ್ನು ನಿನ್ನೆಯಷ್ಟೇ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕದ ಶಾಸಕರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಎಸಗಿದೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ದಕ್ಷಿಣದ ಮತ್ತೊಂದು ರಾಜ್ಯ ಕೇರಳ ಕೇಂದ್ರದ ವಿರುದ್ಧ ತಿರುಗಿಬಿದ್ದಿದ್ದು, ಇನ್ನು ತಮಿಳುನಾಡು ಸಹ ಕೇಂದ್ರದ ವಿರುದ್ಧ ಕೇರಳ ನಡೆಸುತ್ತಿರುವ ಪ್ರತಿಭಟನೆಗೆ ಕೈ ಜೋಡಿಸಿ ಬೆಂಬಲ ಸೂಚಿಸಿದೆ.





