ಕೇರಳದ ಅಲಪ್ಪಿಯಲ್ಲಿ ಬಿಜೆಪಿ ಒಬಿಸಿ ಮೋರ್ಛಾದ ರಾಜ್ಯ ಕಾರ್ಯದರ್ಶಿಯಾಗಿದ್ದ ರಂಜಿತ್ ಶ್ರೀನಿವಾಸ್ ಅವರನ್ನು 2019ರ ಡಿಸೆಂಬರ್ 19 ರಂದು ಅವರ ಮನೆಯಲ್ಲಿಯೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ರಂಜಿತ್ ತಾಯಿ, ಪತ್ನಿ ಹಾಗೂ ಮಗುವಿನ ಮುಂದೆಯೇ ದುಷ್ಕರ್ಮಿಗಳು ಈ ಹತ್ಯೆ ನಡೆಸಿದ್ದರು.
ಈ ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ 15 ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿತ್ತು. ಈ ಕುರಿತು ಹೆಚ್ಚುವರಿ ವಿಚಾರಣೆ ನಡೆಸಿದ್ದ ಮವೆಲ್ಲಿಕಾರಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜನವರಿ 20ರಂದು ತೀರ್ಪು ನೀಡಿ ಎಲ್ಲಾ 15 ಬಂಧಿತ ಆರೋಪಿಗಳನ್ನೂ ದೋಷಿಗಳು ಎಂದು ತೀರ್ಪು ನೀಡಿತ್ತು. ಇಂದು ( ಜನವರಿ 30 ) ಎಲ್ಲಾ ಆರೋಪಿಗಳಿಗೆ ಮರಣ ದಂಡನೆಯನ್ನು ವಿಧಿಸಿ ಆದೇಶ ಹೊರಡಿಸಿದೆ.