ನವದೆಹಲ: ಭಾರತ, ಷೇರುಪೇಟೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಹಾಂಗ್‌ಕಾಂಗ್ ಮಾರ್ಕೆಟ್‌ನ ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಸ್ಟಾಕ್‌ಮಾರ್ಕೆಟ್ ಅನ್ನೋ ಸಾಧನೆ ಮಾಡಿದೆ.
ಮಂಗಳವಾರ ಹಾಂಗ್‌ಕಾಂಗ್ ಷೇರುಪೇಟೆಯಲ್ಲಿ ದಾಖಲಾದ ಎಲ್ಲ ಷೇರುಗಳ ಮೊತ್ತ 4.29 ಬಿಲಿಯನ್ ಡಾಲರ್ ಆಗಿದ್ರೆ, ಭಾರತದ ಷೇರುಗಳ ಮೌಲ್ಯ 4.33 ಟ್ರಿಲಿಯನ್ ಡಾಲರ್ ಆಗಿದೆ.
ಇದೇ ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ ಮಾರ್ಕ್‌ನ್ನ ಕ್ರಾಸ್ ಮಾಡಿದೆ. ಇದ್ರಲ್ಲಿ ಕಳೆದೆರಡು ವರ್ಷಗಳಲ್ಲೇ 2 ಟ್ರಿಲಿಯನ್ ಡಾಲರ್ ಮೌಲ್ಯದ ಷೇರುಗಳು ಸೇರಿವೆ.
ಅಂದ್ಹಾಗೆ ಇತ್ತೀಚಿನ ವರ್ಷಗಳಲ್ಲಿ ಭಾರತ ಮಾರ್ಕೆಟ್ ಹೂಡಿಕೆದಾರರ ಡಾರ್ಲಿಂಗ್ ಆಗ್ತಿದೆ. ಕಾರ್ಪೊರೇಟ್ ವಲಯದಲ್ಲಿ ಒಳ್ಳೇ ಆದಾಯ ಬರ್ತಿರೋದ್ರಿಂದ ರಿಟೇಲ್ ಹೂಡಿಕೆದಾರರ ಬೇಸ್ ಜಾಸ್ತಿಯಾಗ್ತಿದೆ.
ಇದೆ ವೇಳೆ ಅತ್ತ ಕೋವಿಡ್ ರೆಸ್ಟ್ರಿಕ್ಷನ್ಸ್, ಕಂಪನಿಗಳ ಮೇಲೆ ಚೀನಿ ಸರ್ಕಾರದ ಹಿಡಿತ, ಪ್ರಾಪರ್ಟಿ ಸೆಕ್ಟರ್‌ನ ಬಿಕ್ಕಟ್ಟು, ಜಿಯೋಪಾಲಿಟಿಕಲ್ ಉದ್ವಿಗ್ನತೆಯಿಂದ ಚೀನಾ ಮಾರ್ಕೆಟ್ ಡೌನ್ ಆಗ್ತಿದೆ.
ಚೀನಾದ ಹೆಸರಾಂತ ಕಂಪನಿಗಳು ಲಿಸ್ಟ್ ಆಗಿರೋ ಹಾಂಗ್‌ಕಾಂಗ್ ಮಾರ್ಕೆಟ್ ಬೀಳ್ತಾ ಇದೆ. 2021ರಿಂದ ಹಾಂಗ್‌ಕಾಂಗ್ ಮಾರ್ಕೆಟ್ ವ್ಯಾಲೂವೇಷನ್‌ನಲ್ಲಿ 6 ಟ್ರಿಲಿಯನ್ ಡಾಲರ್ ನೀರಿನಂತೆ ಹರಿದು ಹೋಗಿದೆ.
ಹೀಗಾಗಿ ವಿದೇಶಿ ಹೂಡಿಕೆದಾರರು ಭಾರತದತ್ತ ಮುಖ ಮಾಡಿದ್ದಾರೆ. ಕಳೆದ ವರ್ಷ ಸುಮಾರು 21 ಬಿಲಿಯನ್ ಡಾಲರ್ ಭಾರತದಲ್ಲಿ ಇನ್ವೆಸ್ಟ್ ಮಾಡಿದ್ದಾರೆ.





