Mysore
17
few clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ರಾಮ ಮಂದಿರ ಉದ್ಘಾಟನೆ : ೫ ಜನರಿಗೆ ಮಾತ್ರ ಪ್ರವೇಶ

ಹೊಸದಿಲ್ಲಿ: ಜನವರಿ 22ರಂದು ರಾಮ ಮಂದಿರ ಉದ್ಘಾಟನೆಯಾಗಲಿದ್ದು, ಅಂದೇ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ವೇಳೆ ಗರ್ಭಗುಡಿಗೆ ಐವರಿಗೆ ಮಾತ್ರ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್‌ ಪಟೇಲ್‌ , ಸಿಎಂ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್‌ (RSS) ಮುಖ್ಯಸ್ಥ ಮೋಹನ್‌ ಭಾಗವತ್ ಮತ್ತು  ಮಂದಿರದ ಮುಖ್ಯ ಅರ್ಚಕ ಈ ಸಂದರ್ಭದಲ್ಲಿ ಇರಲಿದ್ದಾರೆ.

ಪ್ರಾಣ ಪ್ರತಿಷ್ಠೆ ನಡೆಯುವ ಸಂದರ್ಭದಲ್ಲಿ ಪರದೆಯನ್ನು ಹಾಕಲು ತೀರ್ಮಾನಿಸಲಾಗಿದೆ.

ಈ ಐವರ ಸಮ್ಮುಖದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಗುವ ರಾಮ ಲಲ್ಲಾನ ವಿಗ್ರಹವನ್ನು ತೆರೆಯಲಾಗುತ್ತದೆ. ಧಾರ್ಮಿಕ ವಿಧಿ ವಿಧಾನಗಳ ಅನ್ವಯ ವಿಗ್ರಹಕ್ಕೆ ಮೊದಲು ಕನ್ನಡಿ ತೋರಿಸಲಾಗುತ್ತದೆ. ನಂತರ ಮೂವರು ಆಚಾರ್ಯರ ನೇತೃತ್ವದ ತಂಡ ದಾಲ್ ಪೂಜೆಯನ್ನು ನಡೆಸಿಕೊಡಲಿದೆ.

ಮೊದಲ ತಂಡದ ನೇತೃತ್ವವನ್ನು ಸ್ವಾಮಿ ಗೋವಿಂದ ದೇವ್‌ ಗಿರಿ, 2ನೇ ತಂಡವನ್ನು ಕಾಂಚಿ ಕಾಮಕೋಟಿ ಪೀಠದ ವಿಜಯೇಂದ್ರ ಸರಸ್ವತಿ ಸ್ವಾಮೀಜಿಗಳು , ಮೂರನೇ ತಂಡ ಕಾಶಿಯಲ್ಲಿರುವ 21 ಮಂದಿ ಧಾರ್ಮಿಕ ವಿದ್ವಾಂಸರ ತಂಡ ನಡೆಸಿಕೊಡಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!