Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಚುನಾವಣೆಯಲ್ಲಿ ಜಯಗಳಿಸಿದರೆ ಹಿಂದುಗಳ ಸಮಸ್ಯೆ ಪರಿಹರಿಸುವೆ: ಪಾಕ್‌ ಚುನಾವಣಾ ಅಭ್ಯರ್ಥಿ ಡಾ. ಸವಿರಾ ಪ್ರಕಾಶ

ಇಸ್ಲಾಮಾಬಾದ : ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಜಯಗಳಿಸಿದರೆ ಪಾಕಿಸ್ತಾನದಲ್ಲಿನ ಹಿಂದುಗಳ ಸಮಸ್ಯೆ ಬಗೆಹರಿಸುವೆ ಎಂದು ಪಾಕಿಸ್ತಾನದಲ್ಲಿನ ಮೊದಲ ಮಹಿಳಾ ಅಭ್ಯರ್ಥಿ ಡಾ. ಸವಿರಾ ಪ್ರಕಾಶ ಹೇಳಿಕೆ ನೀಡಿದ್ದಾರೆ.

ಇಸ್ಲಾಮಾಬಾದ  ಪಾಕಿಸ್ತಾನದ ಖೈಬರ್ ಪಾಖ್ಟುನಖ್ವ ಈ ಪ್ರಾಂತ್ಯದಲ್ಲಿನ ಬುನೆರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮೊಟ್ಟಮೊದಲು ಹಿಂದೂ ಮಹಿಳೆ ಡಾ. ಸವಿರಾ ಪ್ರಕಾಶ ಇವರ ಕುರಿತು ಪಾಕಿಸ್ತಾನದಲ್ಲಿ ಎಲ್ಲಾ ಕಡೆ ಚರ್ಚೆ ನಡೆಯುತ್ತಿದೆ.

ಅವರು ತಮ್ಮನ್ನು ಓರ್ವ ‘ದೇಶಭಕ್ತ ಹಿಂದೂ’ ಎಂದು ಹೇಳಿದ್ದಾರೆ. ಡಾ. ಸವಿರಾ, ನಾನು ಏನಾದರೂ ಚುನಾವಣೆಯಲ್ಲಿ ಗೆದ್ದರೆ, ಭಾರತ ಮತ್ತು ಪಾಕಿಸ್ತಾನ ನಡುವೆ ಸೇತುವೆಯ ಕೆಲಸ ಮಾಡಿ ಪಾಕಿಸ್ತಾನದಲ್ಲಿನ ಹಿಂದುಗಳ ಸಮಸ್ಯೆ ಪರಿಹರಿಸಲು ಸಹಾಯ ಮಾಡುವೆ ಎಂದು ಹೇಳಿದ್ದಾರೆ.

ಚುನಾವಣಾ ಕ್ಷೇತ್ರದಲ್ಲಿನ ಮುಸಲ್ಮಾನರು ನನಗೆ ಮತ ನೀಡುವ ಆಶ್ವಾಸನೆ ನೀಡಿ ನನಗೆ ಬೆಂಬಲ ನೀಡಿದ್ದಾರೆ. ನನ್ನ ವಿಜಯದ ನಂತರ ಎರಡು ದೇಶದಲ್ಲಿನ ಹಿಂದೂಗಳು ನನ್ನ ಜೊತೆ ನಿರ್ಭಯತೆಯಿಂದ ಸಂಪರ್ಕಿಸಬಹುದು. ಎರಡೂ ದೇಶಗಳಲ್ಲಿನ ಸಂಬಂಧ ದೃಢಗೊಳಿಸುವುದಕ್ಕಾಗಿ ನಾನು ಸಕಾರಾತ್ಮಕ ನಿಲುವು ತಾಳಿ ಪ್ರಯತ್ನ ಮಾಡುವೆನು ಎಂದು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ