Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಭವ್ಯ ರಾಮಮಂದಿರ ಉದ್ಘಾಟನೆಯ ನೇರ ಪ್ರಸಾರದ ಮಾಹಿತಿ ಇಲ್ಲಿದೆ ನೋಡಿ!

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಭವ್ಯ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮ ನಾಳೆ (ಜನವರಿ 22ರಂದು) ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಲವು ಹಿರಿಯ ನಾಯಕರು, ನಟ-ನಟಿಯರು, ಕ್ರೀಡಾಪಟುಗಳು ಸೇರಿದಂತೆ 7 ಸಾವಿರಕ್ಕೂ ಅಧಿಕ ಗಣ್ಯಾತಿ- ಗಣ್ಯರು ಭಾಗವಹಿಸಿಲಿದ್ದಾರೆ. ಹೀಗಾಗಿ ಅಂದು ಹೆಚ್ಚಿನ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಸೀಮಿತ ಜನರಿಗಷ್ಟೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ದೇಶಾದ್ಯಂತ ರಾಮ ನಾಮ ಜಪದ ಮೂಲಕ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ನೀವು ಬಯಸಿದರೆ, ನಿಮ್ಮ ಮನೆಯಲ್ಲೇ ಕುಳಿತು ಉದ್ಘಾಟನಾ ಕಾಯಕ್ರಮದ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದಾಗಿದೆ.

ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರ ಹಾಗೂ ಲೈವ್‌ ಸ್ಟ್ರೀಮಿಂಗ್‌: ಅಯೋದ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಲೈವ್ ಸ್ಟ್ರೀಮಿಂಗ್  ಜೊತೆಗೆ, ದೂರದರ್ಶನದ ಎಲ್ಲಾ ಚಾನೆಲ್​ಗಳಲ್ಲಿ ನೇರಪ್ರಸಾರ ವೀಕ್ಷಣೆಗೆ ಅವಕಾಶವಿರಲಿದೆ.

ರಾಮಮಂದಿರದ ಮೆಗಾ ಕವರೇಜ್ ಡಿಡಿ ನ್ಯಾಷನಲ್ ಹಾಗೂ ಡಿಡಿ ನ್ಯೂಸ್​ನಲ್ಲಿ ಪ್ರಸಾರವಾಗಲಿದೆ. ಮತ್ತು ಜನವರಿ 23ರಂದು ಶ್ರೀರಾಮ ದೇವಸ್ಥಾನದ ಆರತಿ ಕಾರ್ಯಕ್ರಮ ಕೂಡ ದೂರದರ್ಶನದಲ್ಲಿ ನೇರಪ್ರಸಾರವಾಗಲಿದ್ದು, ಉಚಿತವಾಗಿ ನೋಡಬಹುದಾಗಿದೆ.

ದೂರದರ್ಶನದ ಯೂಟ್ಯೂಬ್​ ಲಿಂಕ್​ನಲ್ಲಿಯೂ ನೇರಪ್ರಸಾರ ವೀಕ್ಷಿಸಬಹುದು. ಭಾರತೀಯ ರಾಯಭಾರ ಕಚೇರಿಗಳು ಕೂಡ ರಾಮ ಮಂದಿರ ಉದ್ಘಟನಾ ಕಾರ್ಯಕ್ರಮವನ್ನು ಲೈವ್ ತೋರಿಸಲಿವೆ.

ಸ್ಮಾರ್ಟ್‌ ಫೋನ್‌ನಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವೀಕ್ಷಿಸ ಬಯಸುವವರು ಜಿಯೋ ಸಿನಿಮಾ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡು, ಪ್ರಾಣ ಪ್ರತಿಷ್ಠ ಎಂಬುದರ ಮೇಲೆ ಕ್ಲಿಕ್‌ ಮಾಡಿ ಲೈವ್‌ ಸ್ಟ್ರೀಮಿಂಗ್‌ ವೀಕ್ಷಣೆ ಮಾಡಬಹುದು.

ಜೊತೆಗೆ ಟ್ವಿಟರ್‌ (ಎಕ್ಸ್)‌ ಅಥವಾ ಫೇಸ್‌ಬುಕ್‌ನಲ್ಲಿ ರಾಮ ಜನ್ಮಭೂಮಿಗೆ ಸಂಬಂಧಿಸಿದ ಟ್ರಸ್ಟ್‌ ಹೆಸರಿನ ಖಾತೆಯಲ್ಲಿಯೂ ಕೂಡಾ ನೇರ ಪ್ರಸಾರದ ವೀಕ್ಷಣೆಗೆ ಅವಕಾಶವಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ