Mysore
23
overcast clouds

Social Media

ಭಾನುವಾರ, 22 ಫೆಬ್ರವರಿ 2026
Light
Dark

ಅತಿ ಕಿರಿಯ ವಯಸ್ಸಿನಲ್ಲೇ ದ್ವಿಶತಕ ಸಿಡಿಸಿದ ಮೂರನೇ ಭಾರತೀಯ ಆಟಗಾರ

ವಿಶಾಖಪಟ್ಟಣಂ: ಭಾರತ ತಂಡದ  ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (209) ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸುವ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

22 ವರ್ಷ 37 ದಿನಗಳ ಜೈಸ್ವಾಲ್ ಈ ಸಾಧನೆ ಮಾಡಿದ ಮೂರನೇ ಆಟಗಾರ. ಇದಕ್ಕೂ ಮುನ್ನ ಮಾಜಿ ಆಟಗಾರ ವಿನೋದ್ ಕಾಂಬ್ಲಿ 1993ರಲ್ಲಿ ತಮ್ಮ 21 ವರ್ಷ 32 ದಿನಗಳ ಹರಯದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ದ್ವಿಶತಕ ಬಳಿಕ ಜಿಂಬಾಬ್ವೆ ವಿರುದ್ಧವೂ ದ್ವಿಶತಕ ಸಿಡಿಸಿದ್ದರು. ಇವರಿಗಿಂತಲೂ ಮುನ್ನ 1971ರಲ್ಲಿ ಸುನೀಲ್ ಗವಾಸ್ಕರ್ ತಮ್ಮ 21 ವರ್ಷ ಹಾಗೂ 283 ದಿನಗಳ ಹರಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದ್ವಿಶತಕ ದಾಖಲಿಸಿದ್ದರು. ಅತಿ ಕಿರಿಯ ವಯಸ್ಸಿನಲ್ಲೇ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಈವರೆಗೂ ಕಾಂಬ್ಲಿ ಹೆಸರಲ್ಲೇ ಉಳಿದಿದೆ.

ಶಾಖಪಟ್ಟಣಂನಲ್ಲಿನ ಡಾ. ವೈಎಸ್.ರಾಜಶೇಖರ ರೆಡ್ಡಿ ಸ್ಟೇಡಿುಂಂನಲ್ಲಿ ನಡೆುುಂತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ 290 ಎಸೆತಗಳಲ್ಲಿ 209 ರನ್ ಸಿಡಿಸಿದರು. ಇದರಲ್ಲಿ 19 ಬೌಂಡರಿ, 07 ಸಿಕ್ಸರ್ ಸೇರಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!