ಛತ್ತಿಸ್‌ಗಡ: ಕಸ ಸಂಗ್ರಹಿಸಿ 20 ರೂ. ದೇಣಿಗೆ ನೀಡಿದ್ದ ವೃದ್ಧೆಗೆ ಅಯೋಧ್ಯೆಗೆ ಆಗಮಿಸಲು ಆಹ್ವಾನ ನೀಡಲಾಗಿದೆ.
ರಾಜೀಮ್ ನಲ್ಲಿ ಕಸ ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದ ಬಿಹುಲಾ ಬಾಯಿ ಅವರು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರದಮಲ್ಲಿ ಭಾಗವಹಿಸುವುದಕ್ಕೆ ಆಹ್ವಾನ ಪಡೆದಿದ್ದಾರೆ.
ವರ್ಷದ ಹಿಂದೆ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಕಾರ್ಯ ಕೈಗೊಂಡಾಗ ಇಡೀ ದಿನ ಕಸ ಸಂಗ್ರಹಿಸಿ ಬರುವ 40 ರೂ. ಸಂಪಾದನೆಯಲ್ಲಿ 20 ರೂ. ದೇಣಿಗೆ ನೀಡಿದ್ದರು. ಸದ್ಯ ಆಹ್ವಾನ ಸ್ವೀಕರಿಸಿದ ನಂತರ ಬಿಹುಲಾ ಬಾಯಿ ಭಾವುಕರಾಗಿದ್ದು, ಈಗ ಬದುಕಿನಲ್ಲಿ ಸಂತಸದ ಹೊಳೆ ಹರಿದಿದೆ ಎಂದಿದ್ದಾರೆ.
ನಾನು ಶ್ರೀರಾಮನ ದರ್ಶನಕ್ಕೆ ಹೋಗುತ್ತೇನೆ. ನನ್ನ ವೃದ್ಧಾಪ್ಯದಲ್ಲಿ ನಾನು ಅಯೋಧ್ಯೆಗೆ ಹೋಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ.