Mysore
23
broken clouds
Light
Dark

Loksabha Elections 2024: ದೇಶದಲ್ಲಿ ಒಟ್ಟು 96.8 ಕೋಟಿ ಅರ್ಹ ಮತದಾರರು

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣೆಗೆ ಸಂಬಂಧಿಸಿದ ಚರ್ಚೆಗಳು ಹಾಗೂ ಚಟುವಟಿಕೆಗಳು ಗರಿಗೆದರಿವೆ. ಅತ್ತ ಚುನಾವಣಾ ಆಯೋಗ ದೇಶದಲ್ಲಿ ಇರುವ ಒಟ್ಟು ಅರ್ಹ ಮತದಾರರ ಸಂಖ್ಯೆ ಎಷ್ಟು ಎಂಬ ಅಂಕಿಅಂಶವನ್ನು ಹಂಚಿಕೊಂಡಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇಶದ 96.88 ಕೋಟಿ ಮತದಾರರು ಅರ್ಹರಾಗಿದ್ದಾರೆ ಎಂದು ಚುನಾವಣಾ ಆಯೋಗ ನಿನ್ನೆ ( ಫೆಬ್ರವರಿ ) ತಿಳಿಸಿದೆ.

ಇನ್ನು ಕಳೆದ ಬಾರಿ ನಡೆದಿದ್ದ ಲೋಕಸಭೆ ಚುನಾವಣೆಯ ಬಳಿಕ ನೋಂದಾಯಿತ ಮತದಾರರಲ್ಲಿ ಶೇ.6ರಷ್ಟು ಏರಿಕೆಯಾಗಿದ್ದು, 18ರಿಂದ 29 ವರ್ಷದವರೆಗಿನ 2 ಕೋಟಿಗೂ ಹೆಚ್ಚು ನೂತನ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹೇಳಿಕೊಂಡಿದ್ದಾರೆ.

ಒಟ್ಟು 96,88,21,926 ಮತದಾರರು ದೇಶದಲ್ಲಿದ್ದು, ಈ ಪೈಕಿ 49,72,31,994 ಮಂದಿ ಪುರುಷ ಮತದಾರರಿದ್ದು, 47,15,41,888 ಮಂದಿ ಮಹಿಳಾ ಮತದಾರರಿದ್ದಾರೆ. 48,044 ಲೈಂಗಿಕ ಅಲ್ಪಸಂಖ್ಯಾತರೂ ಸಹ ಇದ್ದಾರೆ. 2,38,791 ಮತದಾರರು ನೂರು ವರ್ಷಗಳಿಗೂ ಅಧಿಕ ವಯಸ್ಸಿನವರಾಗಿದ್ದು, 88,35,449 ಮತದಾರರು ಅಂಗವಿಕಲರಾಗಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ