ಇಂದು ( ಜನವರಿ 5 ) ಇಡಿ ಅಧಿಕಾರಿಗಳ ತಂಡ ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಶಹಜಹಾನ್ ಶೇಖ್ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಶಹಜಹಾನ್ ಶೇಖ್‌ನ ಸುಮಾರು 200ಕ್ಕೂ ಹೆಚ್ಚು ಬೆಂಬಲಿಗರ ಗುಂಪು ಇಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿತ್ತು. ಅಧಿಕಾರಿಗಳು ಗೇಟ್ ತೆರೆಯಲು ಮುಂದಾದಾಗ ಹಿಂಸಾತ್ಮಕವಾಗಿ ಮಾರ್ಪಟ್ಟ ಗುಂಪು ಅಧಿಕಾರಿಗಳನ್ನು ಬೆನ್ನಟ್ಟಿ ಓಡಿಸಿತು.
ಇನ್ನು ಅಧಿಕಾರಿಗಳಿಗೆ ಗಾಯಗಳಾಗಿದ್ದು, ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ಲೂಟಿ ಮಾಡಲಾಗಿದೆ. ಅಲ್ಲದೇ ಸ್ಥಳದಲ್ಲಿದ್ದ ಮಾಧ್ಯಮವರ ಮೇಲೂ ಸಹ ದಾಳಿ ನಡೆಸಿದ ಕಿಡಿಗೇಡಿಗಳು ಕ್ಯಾಮೆರಾ ಹಾಗೂ ಇತರ ಉಪಕರಣಗಳನ್ನು ಮುರಿದು ಹಾಕಿದರು.
ಈ ಘಟನೆ ಕುರಿತು ಪಶ್ಚಿಮ ಬಂಗಾಳದ ರಾಜ್ಯಪಾಲ ಡಾ. ಸಿ.ವಿ. ಆನಂದ ಬೋಸ್ ಪ್ರತಿಕ್ರಿಯಿಸಿದ್ದು ಖಂಡಿಸಿದ್ದಾರೆ. ಕರ್ತವ್ಯನಿರತ ಜಾರಿ ನಿರ್ದೇಶಕ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದು ರಾಜ್ಯದಲ್ಲಿ ಕಾನೂನು ಕುಸಿದಿರುವುದರ ಸಂಕೇತವಾಗಿದೆ ಎಂದು ಹೇಳಿಕೆ ನೀಡಿದರು.





