Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಜಾತಿಗಣತಿ ವರದಿಗೆ ಡಿಕೆಶಿ ವಿರೋಧ: ಮಲ್ಲಿಕಾರ್ಜುನ ಖರ್ಗೆ ಬಹಿರಂಗ ಟೀಕೆ

ನವದೆಹಲಿ : ಜಾತಿ ಗಣತಿ ವರದಿ ಬಿಡುಗಡೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಭಿನ್ನ ನಿಲುವು ವ್ಯಕ್ತಪಡಿಸಿದ್ದಾರೆ. ವರದಿ ಬಿಡುಗಡೆಯಾಗುವ ಮೊದಲೇ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಡಿಕೆ ನಿಲುವಿನ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಹಿರಂಗವಾಗಿ ಟೀಕೆ ಮಾಡಿದ್ದಾರೆ.

ಸೋಮವಾರ ರಾಜ್ಯಸಭೆಯಲ್ಲಿ ಬಹಿರಂಗವಾಗಿ ಟೀಕಿಸಿರುವ ಖರ್ಗೆ ಅವರು, ಜಾತಿಗಣತಿ ವಿರುದ್ಧ ಎಲ್ಲಾ ಮೇಲ್ಜಾತಿಗಳ ಜನರು ಒಂದುಗೂಡಿದ್ದಾರೆ ಎಂದು ಖರ್ಗೆ ಹೇಳಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.

ನಿಮ್ಮ ಕಾಂಗ್ರೆಸ್‌ ಸರ್ಕಾರ ಜಾತಿ ಗಣತಿ ವರದಿಯನ್ನು ಯಾವಾಗ ಬಹಿರಂಗಪಡಿಸುತ್ತದೆ ಎಂಬುದನ್ನು ಮಿ.ಖರ್ಗೆ ಅವರು ನಮಗೆ ಹೇಳಬೇಕು. ವರದಿ ಬಹಿರಂಗಕ್ಕೆ ಸ್ವಪಕ್ಷದ ಡಿಸಿಎಂ ಅವರೇ ವಿರೋಧ ಪತ್ರಕ್ಕೆ ಸಹಿ ಹಾಕಿದ್ದಾರೆ. ಮಾತ್ರವಲ್ಲದೇ, ಕಾಂಗ್ರೆಸ್‌ ನ ಹಲವು ಶಾಸಕರು, ವೀರಶೈವ ಮಹಾಸಭಾದ ನಾಯಕರು ಸಹಾ ಜಾತಿ ಗಣತಿ ವರದಿ ಬಹಿರಂಗಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪ್ರಹ್ಲಾದ್‌ ಜೋಷಿ ಕುಟುಕಿದರು.

ಇದಕ್ಕೆ ಪ್ರತಿಕ್ರಿಯ ನೀಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಬಿಜೆಪಿಯವರು ಮತ್ತು ಡಿಕೆ ಶಿವಕುಮಾರ್‌ ಸೇರಿದಂತೆ ಹಲವು ನಾಯಕರು ಜಾತಿ ಗಣತಿ ವರದಿಯ ವಿರುದ್ಧವಾಗಿದ್ದಾರೆ. ಅವರು ಕೂಡಾ ವಿರೋಧಿಸುತ್ತಾರೆ ಮತ್ತು ನೀವು ಕೂಡ ವಿರೋಧ ಮಾಡುತ್ತಿದ್ದೀರಿ. ನೀವು ಈ ವಿಷಯದಲ್ಲಿ ಒಂದೇ ಆಗಿದ್ದೀರಿ. ಇದುವೇ ಜಾತಿಯ ಗುಣವಾಗಿದ್ದು, ಮೇಲ್ಜಾತಿಯವರು ಒಳಗೊಳಗೆ ಒಂದುಗೂಡಿರುತ್ತಾರೆ ಎಂದು ಖರ್ಗೆ ಅಸಮಾಧಾನ ಹೊರಹಾಕಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ