Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸಂಸತ್‌ ಭದ್ರತಾ ಲೋಪ: ದೆಹಲಿ ಪೊಲೀಸರಿಂದ ಉತ್ತರಪ್ರದೇಶದಲ್ಲಿ ಮತ್ತೊಬ್ಬನ ಬಂಧನ

ಕಳೆದ ವಾರ ಸಂಸತ್‌ ಭವನಕ್ಕೆ ನುಗ್ಗಿದ್ದ ಆರೋಪಿಗಳನ್ನು ಸತತವಾಗಿ ವಿಚಾರಣೆ ನಡೆಸುತ್ತಿರುವ ದೆಹಲಿ ಪೊಲೀಸರು ಆರೋಪಿಗಳ ಜತೆ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನೂ ಸಹ ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಮೈಸೂರು ಮೂಲದ ಮನೋರಂಜನ್‌ ಸ್ನೇಹಿತನಾಗಿದ್ದ ಬಾಗಲಕೋಟೆ ಮೂಲದ ಸಾಯಿಕೃಷ್ಣ ಎಂಬ ಎಂಜಿನಿಯರ್‌ನನ್ನು ಬಂಧಿಸಿದ್ದ ದೆಹಲಿ ಪೊಲೀಸರು ಅದೇ ದಿನ ಉತ್ತರಪ್ರದೇಶದ ಜಲೌನ್‌ನ ಒರೈ ಪ್ರದೇಶದ ಅತುಲ್‌ ಕುಲ್‌ಶ್ರೇಷ್ಠ ಎಂಬಾತನನ್ನೂ ಸಹ ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿಗಳ ಪ್ರಕಾರ ಅತುಲ್‌ ಕುಲ್‌ಶ್ರೇಷ್ಠ 50 ವರ್ಷ ವಯಸ್ಸಿನ ರೈತ ಎಂದು ತಿಳಿದುಬಂದಿದೆ ಹಾಗೂ ಈತನಿಗೆ ನಾಲ್ವರು ಮಕ್ಕಳಿದ್ದಾರೆ ಎಂದು ಹೇಳಲಾಗಿದೆ. ಜಲೌನ್‌ನ ಒರೈನಲ್ಲಿ ವಾಸವಿರುವ ಈತ ಅಲ್ಲಿ ಎಡಪಂಥೀಯ ಸಿದ್ಧಾಂತವನ್ನು ಬೆಂಬಲಿಸುವ ಮೂಲಕವೇ ಹೆಸರುವಾಸಿಯಾಗಿದ್ದ ಎನ್ನಲಾಗಿದೆ. ಈತ ಫೇಸ್‌ಬುಕ್‌ನಲ್ಲಿ ಭಗತ್‌ಸಿಂಗ್‌ ಫ್ಯಾನ್ಸ್‌ ಕ್ಲಬ್‌ನ ಸದಸ್ಯನಾಗಿದ್ದ ಹಾಗೂ ಆ ಗುಂಪಿನಲ್ಲಿ ಬಂಧಿತರಾಗಿರುವವರ ಪೈಕಿ ಐದು ಮಂದಿ ಸಹ ಇದ್ದರು ಎಂದು ತಿಳಿದುಬಂದಿದೆ. ಅಲ್ಲದೇ ಆ ಐವರ ಪೈಕಿ ಒಬ್ಬರು ಅತುಲ್‌ ಜತೆ ಚಾಟ್‌ ಮಾಡಿದ್ದರು ಎನ್ನಲಾಗಿದೆ.

ಈ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಜಲೌನ್‌ ಎಸ್‌ಪಿ ಇರಾಜ್‌ ರಾಜ್‌ “ದೆಹಲಿ ಪೊಲೀಸರ ತಂಡವೊಂದು ಇಲ್ಲಿಗೆ ಬಂದು ಅತುಲ್‌ ಎಂಬುವವರನ್ನು ತಮ್ಮೊಟ್ಟಿಗೆ ಕರೆದುಕೊಂಡು ಹೋಗಿದ್ದಾರೆ ಹಾಗೂ ಅವರು ಈ ಕುರಿತು ನಮಗೆ ಹೆಚ್ಚೇನೂ ಮಾಹಿತಿ ನೀಡಿಲ್ಲ” ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ