ನವದೆಹಲಿ : ಡೀಪ್ ಫೇಕ್‌ಗಳು ಪ್ರಜಾಪ್ರಭುತ್ವಕ್ಕೆ ಹೊಸ ಅಪಾಯ ಎಂದು ಐಟಿ ಸಚಿವ ಅಶ್ವಿನ್ ವೈಷ್ಣವ್ ಕಳವಳ ವ್ಯಕ್ತಪಡಿಸಿದ್ದಾರೆ.
ಡೀಪ್‌ಫೇಕ್‌ಗಳಿಗೆ ಕಡಿವಾಣ ಹಾಕಲು ಸರ್ಕಾರ ಈಗಾಗಲೇ ಹಲವಾರು ಕ್ರಮ ಕೈಗೊಂಡಿದ್ದು, ಶೀಘ್ರವೇ ಹೊಸ ನಿಯಮಾವಳಿಗಳನ್ನು ರೂಪಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಗುರುವಾರ ಡೀಪ್‌ಫೇಕ್ ಕುರಿತು ಸಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಭೇಟಿಯಾಗಿ ಚರ್ಚಿಸಿದರು.
ಡೀಪ್‌ಫೇಕ್ ಪತ್ತೆ ಹಚ್ಚುವ ವಿಧಾನ, ತಡೆಗಟ್ಟುವಿಕೆ, ವರದಿ ಕಾರ್ಯವಿಧಾನ ಬಲಪಡಿಸುವ ಬಗ್ಗೆ ಬಳಕೆದಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಂಬಂಧಪಟ್ಟ ಕಂಪನಿಗಳು ಒಪ್ಪಿಕೊಂಡಿವೆ ಎಂದು ಮಾಹಿತಿ ನೀಡಿದರು.
ಕರಡು ನಿಯಮಾವಳಿ ಸಿದ್ದಪಡಿಸಿ ಕಡಿಮೆ ಸಮಯದಲ್ಲಿ ಡೀಪ್‌ಫೇಕ್‌ಗಳನ್ನು ತಡೆಯಲು ಹೊಸ ನಿಯಮಾವಳಿ ರೂಪಿಸಲಾಗುವುದು. ನಿಯಮಗಳ ತಿದ್ದುಪಡಿ ಅಥವಾ ಹೊಸ ನಿಯಮಗಳು ಮತ್ತು ಕಾನೂನನ್ನು ಹೊರತರಲು ಹೊಸ ನಿಯಮಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಡೀಪ್‌ಫೇಕ್ ಪ್ರಜಾಫ್ರಭುತ್ವಕ್ಕೆ ಹೊಸ ಬೆದರಿಕೆಯಾಗಿದ್ದು, ಇದನ್ನು ಎದುರಿಸಲು ಅಗತ್ಯ ಕ್ರಮಗಳ ಬಗೆಗಿನ ಸಭೆಯನ್ನು ಡಿಸೆಂಬರ್ ಮೊದಲ ವಾರದಲ್ಲಿ ನಡೆಸಲಾಗುವುದು. ಇದು ಮುಂದಿನ ಕ್ರಮ ಮತ್ತು ಇಂದಿನ ನಿರ್ಧಾರಗಳ ಮೇಲೆ ಕರಡು ನಿಯಮಾವಳಿಗಳಲ್ಲಿ ಏನನ್ನು ಸೇರಿಸಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಸಲಾಗವುದು ಎಂದು ಐಟಿ ಸಚಿವ ಅಶ್ವಿನ್ ವೈಷ್ಣವ್ ಹೇಳಿದರು.