ಮಾಲ್ಡೀವ್ಸ್: ಭಾರತ ಮತ್ತು ಪ್ರಧಾನಿ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಂಬಂಧ ಮಾಲ್ಡೀವ್ಸ್ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪ ಭೇಟಿಯನ್ನು ಲೇವಡಿ ಮಾಡಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಾಲ್ಡೀವ್ಸ್ ಸರ್ಕಾರ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಮೂವರು ಸಚಿವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಲೇವಡಿ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಭಾರತ ಈ ವಿಷಯವನ್ನು ಅಧಿಕೃತವಾಗಿ ಮಾಲ್ಡೀವ್ಸ್ ಸರ್ಕಾರಕ್ಕೆ ತಿಳಿಸಿತ್ತು. ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿರುವ ಮಾಲ್ಡೀವ್ಸ್ ಸರ್ಕಾರ ಯುವ ಸಬಲೀಕರಣ, ಮಾಹಿತಿ ಮತ್ತು ಕಲಾ ಸಚಿವಾಲಯ ಉಪ ಸಚಿವೆ ಮರಿಯಮ್ ಶಿಯುನಾ, ಸಾರಿಗೆ ಮತ್ತು ನಾಗರೀಕ ವಿಮಾನಯಾನ ಸಚಿವಾಲಯದ ಉಪ ಸಚಿವ ಹಸನ್ ಜಿಹಾನ್ ಮತ್ತು ಯುವ ಸಬಲೀಕರಣ, ಮಾಹಿತಿ ಮತ್ತು ಕಲಾ ಸಚಿವಾಲಯ ಉಪ ಸಚಿವ ಮಲ್ಶಾ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ವಿವಾದಾತ್ಮಕ ಹೇಳಿಕೆ ನೀಡಿದ್ದ ಜಾಹಿದ್ ರಮೀಜ್: ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಪ್ರವಾಸವನ್ನು ಲೇವಡಿ ಮಾಡಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮಯಿಝು ಪಕ್ಷದ ಸದಸ್ಯ ಜಾಹಿದ್ ರಮೀಜ್ ಅವರು, ಸಾಮಾಜಿಕ ಮಾಧ್ಯಮ ಬಳಕೆದಾರರು ಲಕ್ಷದ್ವೀಪವನ್ನು ಮಾಲ್ಡೀವ್ಸ್‌ಗೆ ಹೋಲಿಸುತ್ತಾರೆ. ಮಾಲ್ಡೀವ್ಸ್ ಸುಂದರವಾದ ಕಡಲ ತೀರಗಳಿಗೆ ಹೆಸರುವಾಸಿಯಾದ ಪ್ರವಾಸಿ ತಾಣವಾಗಿದೆ ಎಂದಿದ್ದರು.
ಮತ್ತು ಜನವರಿ ೫ ರಂದು ಮತ್ತೊಂದು ಟ್ವೀಟ್ ಮಾಡಿದ್ದ ಅವರು, ಭಾರತ ನಮ್ಮೊಂದಿಗೆ ಎಂದಿಗೂ ಸಮಾನವಾಗಲು ಸಾಧ್ಯವಿಲ್ಲ. ಮಾಲ್ಡೀವ್ಸ್‌ನಂತೆ ಸ್ವಚ್ಛತೆಯನ್ನು ಕಾಪಾಡಲು, ಪ್ರವಾಸಿಗರಿಗೆ ಒದಗಿಸುವ ಉತ್ತಮ ಸೇವೆಯನ್ನು ಭಾರತ ಹೇಗೆ ಒದಗಿಸುತ್ತದೆ? ಅವರ ಕೊಠಡಿಗಳಲ್ಲಿನ ವಾಸನೆಯೇ ಅವರಿಗೆ ದೊಡ್ಡ ಸಮಸ್ಯೆಯಾಗಲಿದೆ ಎಂದು ಬರೆದುಕೊಂಡಿದ್ದರು.
ಜೊತೆಗೆ ಮಾಲ್ಡೀವ್ಸ್‌ನ ಸಚಿವ ಶಿಯುನಾ ಕೂಡಾ ಪ್ರಧಾನಿ ವಿರುದ್ಧ ವಿವಾದಾತ್ಮಕ ಪೋಸ್ಟ್ ಹಾಕಿದ್ದರು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದ್ದು, ಮತ್ತು ಭಾರತ #Boycottmaldives ಅಭಿಯಾನ ನಡೆಸಿದ್ದರು. ಈ ಹಿನ್ನಲೆ ಶಿಯುನಾ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದರು.





