Mysore
26
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಭಾರತ ಸಂವಿಧಾನ ಎಂದಿಗೂ ಜೀವಂತ: ರಾಷ್ಟ್ರಪತಿ ದ್ರೌಪದಿ ಮುರ್ಮು

ಹೊಸದಿಲ್ಲಿ: ಭಾರತ ದೇಶದ ಎಂದಿಗೂ ಜೀವಂತ ಮತ್ತು ಪ್ರಗತಿಪರ ದಾಖಲೆಯಾಗಿದ್ದು, ಸಮಾಜದಲ್ಲಿ ಸಾಮಾಜಿಕ ನ್ಯಾಯ ಹಾಗು ಅಂತರ್ಗತ ಅಭಿವೃದ್ಧಿಯ ಗುರಿ ಸಾಧಿಸಿದ್ದೇವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದ್ದಾರೆ.

ಸಂಸತ್‌ ಅಧಿವೇಶನದಲ್ಲಿ ಇಂದು(ನ.26) ಸಂವಿಧಾನ ಅಂಗೀಕಾರದ 75ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ರಚನೆಗೆ ನೆರವಾದ ಮಹಿಳಾ ಸದಸ್ಯರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದಿದ್ದಾರೆ.

ನಮ್ಮ ದೇಶದ ಸಂವಿಧಾನ ಜೀವಂತ ಹಾಗೂ ಪ್ರಗತಿಪರ ದಾಖಲೆಯಾಗಿದೆ. ಜೊತೆಗೆ ಪ್ರಜಾ ಪ್ರಭುತ್ವದಲ್ಲಿ ಮಹಿಳಾ ಮೀಸಲಾತಿಯೂ ಕಾನೂನಿಂದಾಗಿ ಮಹಿಳಾ ಸಬಲೀಕರಣದ ಹೊಸ ಯುಗವನ್ನೇ ಆರಂಭಿಸಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಅವರು, ಮೈತೇಯಿ ಹಾಗೂ ಸಂಸ್ಕೃತ ಭಾಷೆಯಲ್ಲಿರುವ ಸಂವಿಧಾನ ಆವೃತ್ತಿಗಳು ಮತ್ತು ಸಂವಿಧಾನ ದಿನದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದರು. ಬಳಿಕ ಅಂಚೆ ಚೀಟಿ ಹಾಗೂ ಸಂವಿಧಾನಕ್ಕೆ ಮೀಸಲಾದ ಎರಡು ಕಿರು ಪುಸ್ತಕಗಳನ್ನು ಅನಾವರಣಗೊಳಿಸಿದ್ದಾರೆ.

 

Tags:
error: Content is protected !!