ಛತೀಸ್‌ಗಡ: ನ.7 ರಂದು ಛತ್ತೀಸ್‌ಗಡದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಇದೀಗ ಸಮೀಕ್ಷ ಸಂಸ್ಥೆಗಳು ಫಾಲಿತಾಂಶ ಪ್ರಕಟಿಸಿದೆ. ಆದರೆ ಡಿಸೆಂಬರ್ 3 ರಂದು ಮತ ಎಣಿಕೆ ನಂತರ ಅಂತಿಮ ಫಲಿತಾಂಶ ಗೊತ್ತಾಗಲಿದೆ.
ವಿವಿಧ ಸಂಸ್ಥೆಗಳು ಸಮೀಕ್ಷೆ ನಡೆಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡಬಹುದು ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ತಿಳಿಸಿವೆ. ಎಕ್ಸಿಟ್ ಪೋಲ್ ಪ್ರಕಾರ ಛತ್ತೀಸ್‌ಗಢದಲ್ಲಿ ಬಿಜೆಪಿ 35-45 ಮತ್ತು ಕಾಂಗ್ರೆಸ್ 40-50 ಸ್ಥಾನಗಳನ್ನು ಬರುವ ಲಕ್ಷಣ ಕಾಣಿಸುತ್ತಿದೆ.
ವಿವಿಧ ಸಂಸ್ಥೆ ನೀಡಿರುವ ಎಕ್ಸಿಟ್ ಪೋಲ್ ಫಲಿತಾಂಶ ಹೀಗಿವೆ:
* ಸಿ ವೋಟರ್ಸ್ ಸಮೀಕ್ಷೆ ಪ್ರಕಾರ ಬಿಜೆಪಿ 36-48, ಕಾಂಗ್ರೆಸ್ 41-53, ಇತರೆ-00
* ಪೋಲ್ಸ್ಟಾರ್ ಸಮೀಕ್ಷೆ ಪ್ರಕಾರ ಬಿಜೆಪಿ 40-50, ಕಾಂಗ್ರೆಸ್ 35-45, ಇತರೆ -03
* ಆಕ್ಸಿಸ್ ಇಂಡಿಯಾ ಸಮೀಕ್ಷೆ ಪ್ರಕಾತ ಬಿಜೆಪಿ 36-46 ಕಾಂಗ್ರೆಸ್ 40-50 ಮತ್ತು ಇತರೆ-00
* ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ ಬಿಜೆಪಿ 30-40, ಕಾಂಗ್ರೆಸ್ 46-56, ಇತರೆ-00
* ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಬಿಜೆಪಿ 35-45, ಕಾಂಗ್ರೆಸ್ 42-53, ಇತರೆ -00 ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸವೆ.