ನವದೆಹಲಿ : ಸೀತೆಯನ್ನು ರಕ್ಷಿಸಲು ಯುದ್ಧ ಮಾಡಿದ ರಾಮನ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಆದರೆ, ಪತ್ನಿಯನ್ನೇ ತೊರೆದ ಪ್ರಧಾನಿ ಮೋದಿ ಅವರು ರಾಮಮಂದಿರದ ಉದ್ಘಾಟನಾ ಪೂಜೆ ಹೇಗೆ ನೆರವೇರಿಸುತ್ತಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಅಯೋಧ್ಯೆಯಲ್ಲಿ ಜನವರಿ 22ರಂದು ನೆರವೇರಲಿರುವ ರಾಮ ಮಂದಿರ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಬರೆದುಕೊಂಡಿದ್ದಾರೆ.
‘ರಾಮ ಸುಮಾರು ಒಂದೂವರೆ ದಶಕಗಳ ಕಾಲ ವನವಾಸ ಅನುಭವಿಸಿದ. ಅಪಹರಣಗೊಂಡ ಸೀತೆಯನ್ನು ರಕ್ಷಿಸಲು ಯುದ್ಧ ಮಾಡಿದ. ಆದರೆ ಮೋದಿ ಅವರು ಪತ್ನಿಯನ್ನು ತ್ಯಜಿಸಿದವರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಾಗಿದ್ದರೆ ಅವರು ಹೇಗೆ ಈ ಪೂಜೆ ನೆರವೇರಿಸುತ್ತಾರೆ?’ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಸ್ತಾಪಿಸಿದ್ದಾರೆ.





