ನವದೆಹಲಿ : ಲೋಕಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಶ್ನೆ ಕೇಳುವುದಕ್ಕೆ ಪ್ರತಿಯಾಗಿ ಭಾರಿ ಮೊತ್ತದ ಹಣ ಹಾಗೂ ದುಬಾರಿ ಉಡುಗೊರೆಗಳನ್ನು ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಗುರುವಾರ ಲೋಕಸಭೆಯ ನೈತಿಕ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮೊಯಿತ್ರಾ ವಿರುದ್ಧ ಮಾಡಿದ ಲಂಚದ ಆರೋಪದ ಬಗ್ಗೆ ನೈತಿಕ ಸಮಿತಿ ತನಿಖೆ ನಡೆಸುತ್ತಿದೆ.
ಸಮಿತಿಯು ಪ್ರಶ್ನೆಗಾಗಿ ಲಂಚ ಪ್ರಕರಣದ ತನಿಖೆ ಮಾಡಲು ಕೇಂದ್ರ ಗೃಹ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳಿಂದ ಸಹಾಯ ಪಡೆದುಕೊಂಡಿದೆ ಮತ್ತು ಅವರಿಂದ ವಿವರಗಳನ್ನು ಪಡೆದಿದೆ ಎಂದು ನಂಬಲಾಗಿದೆ.
ಈ ಸಂಬಂಧ ಲೋಕಸಭೆಯ ನೈತಿಕ ಸಮಿತಿಯು ಈಗಾಗಲೇ ಬಿಜೆಪಿ ನಾಯಕ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಅವರ ಹೇಳಿಕೆ ಪಡೆದಿದ್ದು, ಈಗ ಮಹುವಾ ಮೊಯಿತ್ರಾ ಅವರ ಉತ್ತರ ಪಡೆದಿದೆ.