ನವದೆಹಲಿ: ಭಾರತಕ್ಕೆ ಮುಕ್ತ ಸಂಚಾರವನ್ನ ನಿರ್ಬಂಧಿಸುವ ಪ್ರಯತ್ನದಲ್ಲಿ ಭಾರತವು ಮ್ಯಾನ್ಮಾರ್ ಉದ್ದಕ್ಕೂ ಗಡಿಗೆ ಬೇಲಿ ಹಾಕಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಜನಾಂಗೀಯ ಘರ್ಷಣೆಗಳಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯ ಮ್ಯಾನ್ಮಾರ್ ಸೈನಿಕರು ಭಾರತಕ್ಕೆ ಪಲಾಯನ ಮಾಡುತ್ತಿರುವ ಮಧ್ಯೆ ಈ ಪ್ರಕಟಣೆ ಬಂದಿದೆ.
ಕಳೆದ ಮೂರು ತಿಂಗಳಲ್ಲಿ ಸುಮಾರು 600 ಮ್ಯಾನ್ಮಾರ್ ಸೇನಾ ಸೈನಿಕರು ಭಾರತವನ್ನ ಪ್ರವೇಶಿಸಿದ್ದಾರೆ.
ಪಶ್ಚಿಮ ಮ್ಯಾನ್ಮಾರ್ ರಾಜ್ಯ ರಾಖೈನ್ನಲ್ಲಿ ಜನಾಂಗೀಯ ಸಶಸ್ತ್ರ ಗುಂಪಾದ ಅರಾಕನ್ ಆರ್ಮಿ ಉಗ್ರರು ತಮ್ಮ ಶಿಬಿರಗಳನ್ನ ವಶಪಡಿಸಿಕೊಂಡ ನಂತ್ರ ಅವರು ಮಿಜೋರಾಂನ ಲಾಂಗ್ಟಲೈ ಜಿಲ್ಲೆಯಲ್ಲಿ ಆಶ್ರಯ ಪಡೆದರು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.