Mysore
29
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಕೇಜ್ರಿವಾಲ್‌ ಪತ್ನಿಯಿಂದ ವಾಟ್ಸಾಪ್‌ನಲ್ಲಿ ಆಶೀರ್ವಾದ ಅಭಿಯಾನ !

ದೆಹಲಿ: ಇಡಿ ವಶದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪರ ಅವರ ಪತ್ನಿ ಸುನೀತಾ ಶುಕ್ರವಾರ ವಾಟ್ಸಾಪ್‌ ಮೂಲಕ ಕೇಜ್ರಿವಾಲ್‌ ಕೋ ಆಶೀರ್ವಾದ್‌(ಕೇಜ್ರಿವಾಲ್‌ ಅವರನ್ನು ಆಶೀರ್ವದಿಸಿ) ಎನ್ನುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ದೇಶದಲ್ಲಿರುವ ದುಷ್ಟಶಕ್ತಿ ಹಾಗೂ ಸಾರ್ವಾಧಿಕಾರಿ ಶಕ್ತಿಗಳ ವಿರುದ್ಧ ಕೇಜ್ರಿವಾಲ್‌ ಹೋರಾಡುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರು ತಮ್ಮ ಆಶೀರ್ವಾದ ಮತ್ತು ಪಾರ್ಥನೆಯ ಮೂಲಕ ಕೇಜ್ರಿವಾಲ್‌ ಅವರನ್ನು ಬೆಂಬಲಿಸುವಂತೆ ಸುನೀತಾ ಕೇಜ್ರಿವಾಲ್‌ ಕೋರಿದ್ದಾರೆ.

ನನಗೆ ಅನೇಕ ಕರೆಗಳು ಬಂದವು ಅನೇಕ ಜನರು ಅರವಿಂದ್‌ ಕೇಜ್ರಿವಾಲ್‌ಗಾಗಿ ಉಪವಾಸ ಮಾಡುತ್ತಿದ್ದರು. ೮೨೯೭೩೨೪೬೨೪ ಈ ವಾಟ್ಸಾಪ್‌ ಸಂಖ್ಯೆ ಮೂಲಕ ನಿಮ್ಮ ಪ್ರೀತಿಯ ಸಂದೇಶ ಬರೆದು ಕಳುಹಿಸಿ. ನಿಮ್ಮ ಸಂದೇಶಗಳನ್ನು ಓದುವಾಗ ಅವರಿಗೆ ಖುಷಿಯಾಗುತ್ತದೆ.

ಜೈಲಿನಲ್ಲಿರುವ ಅವರಿಗೆ ಎಲ್ಲ ಸಂದೇಶಗಳನ್ನು ತಲುಪಿಸುತ್ತೇನೆ ಎಂದು ಸುನೀತಾ ಹೇಳಿದ್ದಾರೆ. ಕೇಜ್ರಿವಾಲ್‌ ಅವರಿಗೆ ಸಂದೇಶ ಕಳುಹಿಸಲು ನೀವು ಎಎಪಿ ಕಾರ್ಯಕರ್ತರಾಗಿರಬೇಕಿಲ್ಲ. ನೀವು ಯಾವ ಪಕ್ಷದಲ್ಲಿದ್ದರೂ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸಂದೇಶಗಳನ್ನು ಕಳುಹಿಸಿ ಎಂದು ಸುನೀತಾ ಮನವಿ ಮಾಡಿದ್ದಾರೆ.

Tags:
error: Content is protected !!