Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಭಾರತ ರತ್ನ ನನ್ನ ಆದರ್ಶ ಮತ್ತು ತತ್ವಗಳಿಗೆ ಸಂದ ಗೌರವ: ಅಡ್ವಾಣಿ

ದೇಶ ಕಂಡ ಅತ್ಯುನ್ನತ ರಾಜಕಾರಣಿಗಳಲ್ಲಿ ಒಬ್ಬರಾದ, ಬಿಜೆಪಿಯ ಭೀಷ್ಮ ಎಂದೇ ಖ್ಯಾತಿಯನ್ನು ಪಡೆದಿರುವ ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿ ಅವರಿಗೆ ಭಾರತ ರತ್ನವನ್ನು ಘೋಷಣೆ ಮಾಡಲಾಗಿದೆ.

ಅಡ್ವಾಣಿಯವರಿಗೆ ಈ ಗೌರವ ಲಭಿಸಿದ್ದರ ಕುರಿತು ಭಾರೀ ಪ್ರಶಂಸೆ ಹಾಗೂ ಸಂತಸ ವ್ಯಕ್ತವಾಗಿದ್ದು, ಇದರ ಕುರಿತಾಗಿ ಸ್ವತಃ ಎಲ್‌ಕೆ ಅಡ್ವಾಣಿ ಅವರೇ ಪತ್ರ ಬರೆಯುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿ ಓರ್ವ ವ್ಯಕ್ತಿಯಾಗಿ ಮಾತ್ರ ಅಲ್ಲ, ಜೀವನದುದ್ದಕ್ಕೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ಕಾರಣವಾದ ಆದರ್ಶಗಳು ಮತ್ತು ತತ್ವಗಳಿಗೆ ಸಂದ ಗೌರವ ಎಂದು ತಿಳಿಸಿದ್ದಾರೆ.

“ಅತ್ಯಂತ ನಮ್ರತೆ ಮತ್ತು ಕೃತಜ್ಞತೆಯಿಂದ ಇಂದು ನನಗೆ ನೀಡಲಾದ ಭಾರತ ರತ್ನವನ್ನು ಸ್ವೀಕರಿಸುತ್ತೇನೆ” ಎಂದು ಪ್ರಕಟಣೆಯಲ್ಲಿ ಅಡ್ವಾಣಿ ತಿಳಿಸಿದ್ದಾರೆ. 14ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸದಸ್ಯನಾಗಿ ಸೇರಿದಾಗಿನಿಂದ ನಿಸ್ವಾರ್ಥದಿಂದ ಯಾವುದೇ ಪ್ರತಿಫಲ ಬಯಸದೇ ಸೇವೆ ಸಲ್ಲಿಸಿದ್ದೇನೆ. ದೇಶಕ್ಕಾಗಿ ನನ್ನ ಜೀವ ಮುಡಿಪು ಎಂದು ಹೇಳಿದ್ದಾರೆ.

“ಈ ಜೀವನ ನನ್ನದಲ್ಲ. ನನ್ನ ಜೀವನ ದೇಶಕ್ಕಾಗಿ ಮುಡಿಪು” ಎಂದು ಉಲ್ಲೇಖಿಸಿರುವ ಅಡ್ವಾಣಿ ಈ ವೇದವಾಕ್ಯವೇ ತನ್ನ ಜೀವನಕ್ಕೆ ಸ್ಪೂರ್ತಿಯಾಗಿದೆ ಎಂದು ತಿಳಿಸಿದ್ದಾರೆ. ಪಂಡಿತ್‌ ದೀನದಯಾಳ್‌ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಗೌರವಕ್ಕೆ ಪಾತ್ರನಾದ ನಾನು ಇಂದು ಆ ಇಬ್ಬರು ಗಣ್ಯ ವ್ಯಕ್ತಿಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದಿದ್ದಾರೆ.

ತಮ್ಮ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರಿಗೆ ಕೃತಜ್ಞತೆ ಸಲ್ಲಿಸಿದ ಅಡ್ವಾಣಿಯವರು ಪತ್ನಿ ಕಮಲಾ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಸಹ ಧನ್ಯವಾದ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ