Mysore
21
broken clouds

Social Media

ಬುಧವಾರ, 08 ಏಪ್ರಿಲ 2026
Light
Dark

ರಾಮಲಲ್ಲಾ ವಿಗ್ರಹದ ಸಂಪೂರ್ಣ ದರ್ಶನ

ಮುಂದಿನ ಸೋಮವಾರ ( ಜನವರಿ 22 ) ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠೆ ಕಾರ್ಯ ನಡೆಯಲಿದ್ದು, ಕ್ಷಣಗಣನೆ ಆರಂಭಗೊಂಡಿದೆ. ಇನ್ನು ಪ್ರಾಣ ಪ್ರತಿಷ್ಠೆಗೆ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ ವಿಗ್ರಹ ನಿನ್ನೆಯೇ ( ಜನವರಿ 18 ) ರಾಮಮಂದಿರದ ಗರ್ಭಗೃಹವನ್ನು ತಲುಪಿದೆ.

 

ಹೀಗೆ ರಾಮಮಂದಿರ ತಲುಪಿದ ಬಳಿಕ ಬಾಲರಾಮನ ಮೂರ್ತಿಯ ವಿವಿಧ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿವೆ. ಮೊದಲಿಗೆ ಬಟ್ಟೆಯಿಂದ ಸುತ್ತಲ್ಪಟ್ಟಿದ್ದ ಮೂರ್ತಿಯ ಫೋಟೊ ಹೊರಬಿದ್ದಿತ್ತು. ಬಳಿಕ ಕಣ್ಣಿಗೆ ಮಾತ್ರ ಬಟ್ಟೆ ಕಟ್ಟಿದ್ದ ಬಾಲರಾಮನ ಮೂರ್ತಿ ಫೋಟೊ ಬಿಡುಗಡೆಯಾಗಿತ್ತು. ಇದೀಗ ಸಂಪೂರ್ಣವಾಗಿ ಬಾಲರಾಮನ ವಿಗ್ರಹದ ಫೋಟೊ ಬಿಡುಗಡೆಯಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!