Mysore
18
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ಕೊರೊನಾ ಜತೆ ಹೆಚ್ಚಾಯಿತು ಹಳೆ ಸಾಂಕ್ರಾಮಿಕ ರೋಗಗಳ ಅಬ್ಬರ

ಕಳೆದ ಎರಡು ಮೂರು ದಿನಗಳಿಂದ ಕೇರಳ ರಾಜ್ಯದಲ್ಲಿ ಕೊವಿಡ್‌ ಮತ್ತೆ ಉಲ್ಬಣಗೊಳ್ಳುತ್ತಿರುವ ಸುದ್ದಿ ಕೇರಳ ಮಾತ್ರವಲ್ಲದೇ ಇಡೀ ದೇಶ ಜನತೆಯಲ್ಲಿ ಚಿಂತೆಯನ್ನುಂಟುಮಾಡಿದೆ. ಕೇರಳದಲ್ಲಿ ಈಗಾಗಲೇ ಸಕ್ರಿಯ ಕೊವಿಡ್‌ ಸೋಂಕಿತರ ಸಂಖ್ಯೆ 1000 ಗಡಿ ದಾಟಿದ್ದು, ಇದರ ಜತೆಗೆ ಕೊವಿಡ್‌ನ ಮತ್ತೊಂದು ತಳಿ ಜೆಎನ್‌ 1ನ ಒಂದು ಕೇಸ್‌ ಸಹ ಕೇರಳದಲ್ಲಿ ಪತ್ತೆಯಾಗಿದೆ. ದಿನವೊಂದಕ್ಕೆ ಕೇರಳದಲ್ಲಿ 300ಕ್ಕೂ ಹೆಚ್ಚು ಹೊಸ ಕೊವಿಡ್‌ ಕೇಸ್‌ಗಳು ವರದಿಯಾಗಲು ಆರಂಭಿಸಿದ್ದು, ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

ಕೇರಳದಲ್ಲಿ ಈ ಕೊವಿಡ್‌ ಹಾಗೂ ಜೆಎನ್‌ 1 ಜತೆಗೆ ಈ ಹಿಂದೆ ಮಹಾಮಾರಿಯಾಗಿ ಕಾಡಿದ್ದ ನಿಫಾ ವೈರಸ್‌ ಸಹ ಮರುಜೀವ ಪಡೆದುಕೊಂಡಿದೆ ಇಂದಿಗೂ ಕೆಲ ಸಕ್ರಿಯ ಪ್ರಕರಣಗಳಿವೆ. ಹೀಗೆ ರಾಜ್ಯದಲ್ಲಿ ಒಟ್ಟು ಮೂರು ಮೂರು ವೈರಸ್‌ಗಳು ಕಂಟಕವಾಗಿ ಪರಿಣಮಿಸಿವೆ.

ಇದು ಕೇರಳದ ಕಥೆಯಾದರೆ ಕೇರಳದ ಜತೆ ಗಡಿಯನ್ನು ಹಂಚಿಕೊಂಡಿರುವ ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಈಗಾಗಲೇ ಈ ಕುರಿತು ಆತಂಕ ಮನೆ ಮಾಡಿದೆ. ಅಲ್ಲದೇ ಈ ಜಿಲ್ಲೆಗಳಲ್ಲಿ ಬೆಕ್ಕುಗಳ ರೋಗ ಹಾಗೂ ಕಾಲುಬಾಯಿ ರೋಗಗಳು ಈಗಾಗಲೇ ಜನರಿಗೆ ತಲೆನೋವಾಗಿದೆ. ಕರಾವಳಿ ಭಾಗದ ದನ ಕರುಗಳಲ್ಲಿ ಈಗಲೂ ಕಾಲುಬಾಯಿ ರೋಗಗಳು ಪತ್ತೆಯಾಗುತ್ತಿದ್ದು, ಇತ್ತೀಚಿನ ಕೆಲ ದಿನಗಳಿಂದ ಬೆಕ್ಕು ರೋಗವೂ ಹೆಚ್ಚಾಗಿದೆ. ಸಂಪಾಜೆ ಗ್ರಾಮದ ಸುತ್ತಮುತ್ತ ಬೆಕ್ಕಿನ ಜ್ವರಕ್ಕೆ ಹಲವಾರು ಬೆಕ್ಕುಗಳು ಬಲಿಯಾಗಿವೆ. ಒಟ್ಟಿನಲ್ಲಿ ಕೊರೊನಾ ಮಹಾಮಾರಿ ಜತೆಗೆ ಪ್ರಾಣಿಗಳ ಸಾಂಕ್ರಾಮಿಕ ರೋಗಗಳೂ ಸಹ ಉಲ್ಬಣಗೊಳ್ಳುತ್ತಿರುವ ಕಾರಣ ಜನರು ಈ ಕುರಿತು ತುಸು ಹೆಚ್ಚು ಎಚ್ಚರಿಕೆ ವಹಿಸಬೇಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!