Mysore
26
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ವಾಯುಗುಣಮಟ್ಟ ಸುಧಾರಣೆ: ಸಮ-ಬೆಸ ಸಂಖ್ಯೆ ನಿಯಮ ಹಿಂಪಡೆದ ದೆಹಲಿ ಸರ್ಕಾರ

ನವದೆಹಲಿ : ಮಳೆ ಪರಿಣಾಮ ದೆಹಲಿಯಲ್ಲಿ ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡಿದ್ದು, ನವೆಂಬರ್‌ 13 ರಿಂದ 20 ವರೆಗೆ ನಿಗಧಿಯಾಗಿದ್ದ ಸಮ-ಬೆಸ ಸಂಖ್ಯೆ ನಿಯಮವನ್ನು ಪರಿಸರ ಸಚಿವ ಗೋಪಾಲ್‌ ರೈ ಹಿಂಪಡೆದಿದ್ದಾರೆ.

ನವದೆಹಲಿಯಲ್ಲಿಂದು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೀಪಾವಳಿ ನಂತರ ವಾಯುಗುಣಮಟ್ಟ ಪರಿಶೀಲಿಸಿದ ನಂತರ ವಾಹನಗಳ ಸಂಚಾರಕ್ಕೆ ಅಗತ್ಯಬಿದ್ದರೆ ಸಮ-ಬೆಸ ನಿಯಮವನ್ನು ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ ನಂತರ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಮಂಗಳವಾರ, ಸುಪ್ರೀಂ ಕೋರ್ಟ್ ವಾಹನ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ದೆಹಲಿ ಸರ್ಕಾರದ ಕಾರು-ಪಡಿತರ ಯೋಜನೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸಿತ್ತು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!