Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಪ್ರಿಯತಮೆಯ ವೇಷ ಧರಿಸಿ ಪರೀಕ್ಷೆ ಬರೆಯಲು ಬಂದು ಸಿಕ್ಕಿ ಬಿದ್ದ ಯುವಕ

ನವೆಹಲಿ: ಪಂಜಾಬ್ ಫರೀದ್ಯೋಟ್ ನ ಕೋಟ್ಯಪುರದ ಕೇಂದ್ರವೊಂದರಲ್ಲಿ ಜನವರಿ 7ರಂದು ನಡೆದ ಮಲ್ಟಿ-ಪರ್ಪಸ್ ಆರೋಗ್ಯ ಕಾರ್ಯಕರ್ತರ ನೇಮಕಾತಿ ಪರೀಕ್ಷೆಗಾಗಿ ತನ್ನ ಪ್ರಿಯತಮೆಯ ವೇಷ ಧರಿಸಿ ಆಕೆಯ ಪರ ಪರೀಕ್ಷೆ ಬರೆಯಲು ಆಗಮಿಸಿ ಯುವಕನೊಬ್ಬ ಸಿಕ್ಕಿಬಿದ್ದಿರುವ ಘಟನೆ ನಡದಿದೆ.

ಬಾಬಾ ಫರೀದ್ಯೋಟ್ ಯುನಿವರ್ಸಿಟಿ ಆಫ್ ಹೆಲ್ತ್ ಸಾಯನ್ಸಸ್ ನಡೆಸಿದ ಪರೀಕ್ಷೆ ಕೋಟ್ಕಪುರದ ಡಿಎವಿ ಪಬ್ಲಿಕ್ ಸ್ಕೂಲಿನಲ್ಲಿ ಪಡೆದಿತ್ತು. ತನ್ನ ಪ್ರಿಯತಮೆ ಪರಂಜೀತ್ ಕೌರ್‌ಗೆ ಸಹಾಯ ಮಾಡಲೆಂದು ಆಕೆಯ ವೇಷ ಧರಿಸಿ ಫಝಿಲ್ಕಾ ಎಂಬಲ್ಲಿನ ಅಂಗ್ರೇಜ್ ಸಿಂಗ್ ಪರೀಕ್ಷಾ ಕೇಂದ್ರಕ್ಕೆ ಮಹಿಳೆಯರು ಉಡುಪು, ಕೆಂಪು ಬಳೆ, ಬಿಂದಿ, ಲಿಪ್ಪಿಕ್ ಧರಿಸಿ ಬಂದಿದ್ದ. ತಾನು ಪರಂಜೀತ್ ಕೌರ್ ಎಂದು ತೋರಿಸಿಕೊಳ್ಳಲು ನಕಲಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಅನ್ನು ತಯಾರಿಸಿದ್ದ. ಇನ್ನೇನು ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಸಿಕ್ಕಿತೆಂಬಷ್ಟರಲ್ಲಿ ಬಯೋಮೆಟ್ರಿಕ್ ಸಾಧನದಲ್ಲಿ ಬೆರಳಚ್ಚು ಮ್ಯಾಚ್‌ ಆಗದೇ ಆತ ಸಿಕ್ಕಿ ಬಿದ್ದಿದ್ದಾನೆ.

ಘಟನೆಯ ನಂತರ ಪರಂಜೀತ್ ಕೌರ್ ಅರ್ಜಿಯನ್ನು ತಿರಸ್ಕರಿಸಲಾಯಿತು ಹಾಗೂ ಅಂಗ್ರೇಜ್ ಸಿಂಗ್ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಆಡಳಿತ ಮುಂದಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ