Mysore
22
broken clouds
Light
Dark

ಪ್ರಪಂಚದ ಬಲಿಷ್ಠ ಸೇನೆ ಪಟ್ಟಿಯಲ್ಲಿ ಭಾರತಕ್ಕೆ ೪ನೇ ಸ್ಥಾನ!

2024ನೇ ಸಾಲಿನ ವಿಶ್ವದ ಅತ್ಯಂತ ಬಲಿಷ್ಠ ಸೇನೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಭಾರತ 4ನೇ ಸ್ಥಾನ ಪಡೆದಿದೆ.

ಗ್ಲೋಬಲ್ ಫೈರ್ ಪವರ್ 145 ದೇಶಗಳ ಸೇನಾ ಸಾಮರ್ಥ್ಯ ಕುರಿತು ಸಮೀಕ್ಷೆ ನಡೆಸಿದ್ದು, ಸೇನಾ ತುಕಡಿಗಳ ಸಂಖ್ಯೆ, ಸೇನಾ ಉಪಕರಣಗಳು, ಹಣಕಾಸು ಸ್ಥಿರತೆ, ಭೂಮಿಯ ವಿಸ್ತಾರ ಮತ್ತು ಸಂಪನ್ಮೂಲ ಸೇರಿದಂತೆ 60 ವಿಷಯಗಳ ಆಧಾರದ ಮೇಲೆ ಸ್ಥಾನ  ನೀಡಲಾಗಿದೆ.

ಗ್ಲೋಬರ್ ಫೈರ್ ಪವರ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ದೇಶದ ಅತ್ಯಂತ ಬಲಿಷ್ಠ ಸೇನೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ರಷ್ಯಾ ಮತ್ತು ಚೀನಾ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದರೆ, ಭಾರತ 4ನೇ ಸ್ಥಾನ ಗಳಿಸಿದೆ. ದಕ್ಷಿಣ ಕೊರಿಯಾ 5ನೇ ಸ್ಥಾನ ಪಡೆಯುವ ಮೂಲಕ ಟಾಪ್ 5ನಲ್ಲಿ ಸ್ಥಾನದಲ್ಲಿದೆ.

ಯುನೈಟೆಡ್ ಕಿಂಗ್ಡಮ್ (ಬ್ರಿಟನ್), ಜಪಾನ್, ಟರ್ಕಿ, ಪಾಕಿಸ್ತಾನ ಮತ್ತು ಇಟಲಿ ಕ್ರಮವಾಗಿ 5ರಿಂದ 10ನೇ ಸ್ಥಾನ ಪಡೆದಿದೆ. ಭಾರತದ ನೆರೆಯ ದೇಶಗಳಾದ ಪಾಕಿಸ್ತಾನ 9ನೇ ಸ್ಥಾನದಲ್ಲಿದ್ದರೆ, ಚೀನಾ ಮೂರನೇ ಸ್ಥಾನ ಗಳಿಸಿದೆ.

ಅತ್ಯಂತ ದುರ್ಬಲ ಸೇನೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭೂತಾನ್ ಅಗ್ರಸ್ಥಾನದಲ್ಲಿದೆ. ಮಾಲ್ಡೋವಾ, ಸುರಿನೇಮ್, ಸೊಮಾಲಿಯಾ, ಬೆನಿನ್, ಲಿಬಿರಿಯಾ, ಬೆಲಿಜ್, ಸಿಯಾರಾ ಲಿಯೊನ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಐಸ್ ಲ್ಯಾಂಡ್ ನಂತರದ ಸ್ಥಾನದಲ್ಲಿವೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ