ಪಂಚರಾಜ್ಯ ಫಲಿತಾಂಶ ಪ್ರಕಟಗೊಳ್ಳುವ ಹಿನ್ನಲೆ 4 ರಾಜ್ಯಗಳಿಗೆ ಕಾಂಗ್ರೆಸ್ ಚುನಾವಣಾ ವೀಕ್ಷಕರನ್ನು ನೇಮಿಸಿದೆ. ರಾಜಸ್ಥಾನಕ್ಕೆ ಭೂಪೇಂದ್ರ ಸಿಂಗ್ ಹೂಡಾ, ಮಧುಸೂದನ್ ಮಿಸ್ತ್ರಿ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ತೆಲಂಗಾಣಕ್ಕೆ ಡಿ.ಕೆ.ಶಿವಕುಮಾರ್, ಛತ್ತೀಸ್‌ಗಢದಲ್ಲಿ ಅಜಯ್ ಮಾಕನ್, ರಮೇಶ್ ಚೆನ್ನಿತ್ತಲ ಅವರನ್ನು ನೇಮಕ ಮಾಡಲಾಗಿದೆ.
ಮಧ್ಯಪ್ರದೇಶಕ್ಕೆ ಸಂಸದರಾದ ಅಧೀರ್ ರಂಜನ್ ಚೌಧರಿ, ಪೃಥ್ವಿರಾಜ್ ಚವಾಣ್, ರಾಜೀವ್ ಶುಕ್ಲಾ ಮತ್ತು ಚಂದ್ರಕಾಂತ್ ಹಂದೋರೆ ಅವರಿಗೆ ಜವಾಬ್ದಾರಿ ನೀಡಲಾಗಿದೆ.