Mysore
20
scattered clouds

Social Media

ಸೋಮವಾರ, 26 ಜನವರಿ 2026
Light
Dark

ಸಂಸತ್‌ ಭದ್ರತಾ ಲೋಪ: ಮತ್ತಿಬ್ಬರು ಸಂಸದರ ಅಮಾನತು

ಕಳೆದ ವಾರ ನೂತನ ಸಂಸತ್‌ ಭವನದಲ್ಲಿ ಉಂಟಾದ ಭದ್ರತಾ ಲೋಪ ಇದೀಗ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ತಿಕ್ಕಾಟಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯಿಂದ ದಾಖಲೆಯ ಮಟ್ಟದಲ್ಲಿ ಸಂಸದರ ಅಮಾನತಾಗಿದೆ. ಸೋಮವಾರ ಲೋಕಸಭೆಯ 46 ಹಾಗೂ ರಾಜ್ಯಸಭೆಯ 46 ಸಂಸದರು ಸೇರಿದಂತೆ ಒಟ್ಟು 92 ಸಂಸದರ ಅಮಾನತಾಗಿತ್ತು. ನಿನ್ನೆ ಲೋಕಸಭೆಯ 49 ಸಂಸದರನ್ನು ಇಡೀ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. ಈ ಮೂಲಕ ಎರಡೇ ದಿನಗಳಲ್ಲಿ ಒಟ್ಟು 141 ಸಂಸದರ ಅಮಾನತು ಜರುಗಿತ್ತು.

ಇದೀಗ ಇಂದು ( ಡಿಸೆಂಬರ್‌ 20 ) ಮತ್ತಿಬ್ಬರು ಸಂಸದರ ಅಮಾನತಾಗಿದ್ದು, ಅಮಾನತಾದ ಸಂಸದರ ಸಂಖ್ಯೆ 143ಕ್ಕೆ ಏರಿಕೆ ಕಂಡಿದೆ. ಸೋಮವಾರ 92 ಸದಸ್ಯರ ಅಮಾನತಾಗಿರುವುದು ಇತಿಹಾಸದಲ್ಲಿಯೇ ದಿನವೊಂದರಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಅಮಾನತಾದ ದಾಖಲೆ ಬರೆದಿದೆ. 1989ರಲ್ಲಿ ಒಂದೇ ದಿನ ಒಟ್ಟು 63 ಸಂಸದರ ಸಂಸದರನ್ನು ಅಮಾನತು ಮಾಡಲಾಗಿತ್ತು. ನಿನ್ನೆ ನಡೆದ ಅಮಾನತು ಪ್ರಕ್ರಿಯೆ ಈ ದಾಖಲೆಯನ್ನು ಹಿಂದಿಕ್ಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!