Mysore
20
clear sky
Light
Dark

ತಮಿಳುನಾಡು: 15 ಮಾಜಿ ಶಾಸಕರು ಬಿಜೆಪಿ ಸೇರ್ಪಡೆ

ನವದೆಹಲಿ: ಬಿಜೆಪಿಯು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವತ್ತ ಗಮನಹರಿಸುತ್ತಿದ್ದು, ಇದರ ಉದ್ದೇಶವಾಗಿ ತಮಿಳುನಾಡಿನಲ್ಲಿ ಮಾಜಿ ಸಂಸದರು, ಮಾಜಿ ಶಾಸಕರು ಸೇರಿದಂತೆ ವಿವಿಧ ಪಕ್ಷಗಳ 15 ಮುಖಂಡರನ್ನು ಇಂದು ( ಫೆಬ್ರವರಿ 7 ) ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಈ ಪೈಕಿ ಹೆಚ್ಚಿನ ನಾಯಕರು ಎಐಎಡಿಎಂಕೆ ಪಕ್ಷದವರಾಗಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಮತ್ತು ಎಲ್.‌ ಮುರುಗನ್‌ ಅವರ ನೇತೃತ್ವದಲ್ಲಿ ಈ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅಣ್ಣಾಮಲೈ ಮೂರನೇ ಅವಧಿಗೆ ಮತ್ತೊಮ್ಮೆ ಮೋದಿಯವರನ್ನು ಅಧಿಕಾರಕ್ಕೆ ತರಲು, ಬಿಜೆಪಿಗೆ ಸೇರಿರುವ ಎಲ್ಲಾ ನಾಯಕರು ಅನುಭವ ಉಳ್ಳವರಾಗಿರುವುದರಿಂದ ಅನುಕೂಲವಾಗುತ್ತದೆ ಎಂದರು. ಡಿಎಂಕೆ ಪಕ್ಷದಿಂದ ತಮಿಳುನಾಡಿನಲ್ಲಿ ಆಗುತ್ತಿರುವ ವಿದ್ಯಮಾನಗಳನ್ನು ಜನರು ಗಮನಿಸುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಾದೇಶಿಕ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯು ಈ ರಾಜ್ಯದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿಲ್ಲದಿದ್ದರೂ ಮೋದಿಯವರ 10 ವರ್ಷಗಳ ಆಡಳಿತಾವಧಿಯಲ್ಲಿ ನಡೆದಿರುವ ಬದಲಾವಣೆಗಳನ್ನು ನೋಡಿ ಎಲ್ಲಾ ನಾಯಕರು ಬಿಜೆಪಿಗೆ ಸೇರಿರುವುದನ್ನು ಗಮನಿಸಿದರೆ, ಜನರು ಮೋದಿಯರೇ ಮೂರನೇ ಬಾರಿಗೆ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಚಂದ್ರಶೇಖರ್‌ ಭರವಸೆಯ ಮಾತುಗಳನ್ನಾಡಿದರು.

ಮೋದಿಯವರ ಭವಿಷ್ಯ ನುಡಿಯ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 370 ಸೀಟುಗಳನ್ನು ಗೆದ್ದರೆ, ಎನ್‌ಡಿಎ 400 ಸೀಟುಗಳನ್ನು ದಾಟಲಿದೆ ಅದರಲ್ಲಿ ತಮಿಳುನಾಡಿನಿಂದ ಹೆಚ್ಚು ಸ್ಥಾನ ಬರಲಿವೆ ಎಂದು ಚಂದ್ರಶೇಖರ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ