ತಿರುವನಂತಪುರಂ: ಐದು ಮಂದಿಯನ್ನು ಹತ್ಯೆಗೈದಿದ್ದೇನೆ ಎಂದು ಯುವಕನೊಬ್ಬ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ಆರೋಪಿಯನ್ನು ಪೆರುಮಳದ ನಿವಾಸಿ ಅಪ್ಸಾನ್ ಎಂದು ಗುರುತಿಸಲಾಗಿದೆ. ನಾನು ನನ್ನ ತಾಯಿ, ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ, ಹಾಗೂ ಗೆಳತಿಯನ್ನು ಮೂರು ವಿವಿಧ ನಿವಾಸಗಳಲ್ಲಿ ಕೊಂದಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ.
ಮೂರು ಕಡೆಗಳಲ್ಲಿ ಆರೋಪಿ ಅಪ್ಸಾನ್ ಕೇವಲ ಎರಡು ಗಂಟೆಗಳಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಅಪ್ಸಾನ್ ಠಾಣೆಗೆ ತೆರಳುವುದಕ್ಕೂ ಮುಂಚೆ ವಿಷ ಸೇವಿಸಿದ್ದ ಎನ್ನಲಾಗಿದ್ದು, ಆತನನ್ನು ಸಹ ಪೊಲೀಸರು ತಿರುವನಂತಪುರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪ್ಸಾನ್ ತನ್ನ ಅಜ್ಜಿಯ ಒಡವೆಗಳಿಗಾಗಿ ಆಕೆಯನ್ನು ಕೋರಿದ್ದ ಎಂದು ಹೇಳಲಾಗಿದೆ. ನನ್ನ ಸಂಬಂಧಿಕರು ನನಗೆ ಹಣಕಾಸು ನೆರವು ನೀಡಲು ನಿರಾಕರಿಸಿದ್ದರಿಂದ ನಾನು ಅವರನ್ನೆಲ್ಲಾ ಹತ್ಯೆಗೈದಿದ್ದೇನೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.





