ವಡೋದರಾ: ಗುಜರಾತ್‌ನ ವಡೋದರಾ ಕ್ರಿಕೆಟ್ ಸ್ಟೇಡಿಯಂನಲ್ಲಿ 3ನೇ ಆವತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಪ್ರಾರಂಭವಾಗಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೆಂಟ್ಸ್ ತಂಡಗಳೂ ಮುಖಾಮುಖಿಯಾಗಲಿವೆ.
ಮಹಿಳಾ ಪ್ರೀಮಿಯರ್ ಲೀಗ್ ಇಂದಿನಿಂದ(ಫೆಬ್ರವರಿ.14) ಪ್ರಾರಂಭವಾಗಲಿದ್ದು, ರಾತ್ರಿ ೭.೩೦ಕ್ಕೆ ವಡೋದರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೆಂಟ್ಸ್ ತಂಡಗಳ ಮೂಲಕ ಉದ್ಘಾಟನೆಯಾಗಲಿದೆ.
ಯಾವುದರಲ್ಲಿ ನೇರಪ್ರಸಾರ?
೨೦೨೫ನೇ ಸಾಲಿನ ಮಹಿಳಾ ಪ್ರೀಮಿಯರ್ ಲೀಗ್‌ನ ಎಲ್ಲಾ ಪಂದ್ಯಗಳು ರಾತ್ರ ೭.೩೦ ಗಂಟೆಯಿಂದ ಪ್ರಾರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಚಾನಲ್‌ನಲ್ಲಿ ನೇರಪ್ರಸಾರವಾಗಲಿವೆ. ಅಲ್ಲದೇ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಆಪ್ ಹಾಗೂ ವೆಬ್‌ಸೈಟ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್‌ನಲ್ಲಿ ಇರಲಿವೆ.