Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಅವಕಾಶ ಸಿಕ್ಕರೆ ಇಂಡಿಯಾ ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳುತ್ತೇನೆ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಅವಕಾಶ ದೊರೆತರೆ ಮೈತ್ರಿಕೂಟದ ನಾಯಕತ್ವವನ್ನು ನಾನೇ ವಹಿಸಿಕೊಳ್ಳಲು ಸಿದ್ಧ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇಂಡಿಯಾ ಮೈತ್ರಿಕೂಟದ ಕೆಲಸ ಮಾಡುತ್ತಿರುವ ಬಗೆಯ ಕುರಿತು ಭಾರೀ ಅಸಮಾಧಾನ ವ್ಯಕ್ತಪಡಿಸಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಈಗ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಸಿಎಂ ಹೊಣೆಯ ಜೊತೆಗೆ ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸುವ ಹೊಣೆಯನ್ನು ನಾನು ಏಕಕಾಲದಲ್ಲಿ ನಿರ್ವಹಿಸಲು ಸಾಧ್ಯವಿದೆ ಎಂದರು.

ಇಂಡಿಯಾ ಮೈತ್ರಿಕೂಟವನ್ನು ನಾನು ರೂಪಿಸಿದ್ದೆ. ಈಗ ಅದನ್ನು ನಿರ್ವಹಿಸುವ ಹೊಣೆಯು ಮೈತ್ರಿಕೂಟವನ್ನು ಮುನ್ನಡೆಸುತ್ತಿರುವವರ ಮೇಲಿದೆ. ಅವರಿಗೆ ನಿರ್ವಹಣೆ ಸಾಧ್ಯವಿಲ್ಲ ಎಂದರೆ ನಾನೇನು ಮಾಡಲಿ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕು ಎಂದು ನಾನು ಹೇಳುತ್ತೇನೆ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ನನಗೆ ಪಶ್ಚಿಮ ಬಂಗಾಳದಿಂದ ಹೊರಗಡೆ ಹೋಗಲು ಇಷ್ಟವಿಲ್ಲ. ಆದರೆ ನಾನು ಇಲ್ಲಿಂದಲೇ ಮೈತ್ರಿಕೂಟವನ್ನು ನಡೆಸಬಲ್ಲೆ ಎಂದು ಹೇಳಿದರು.

ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳ ಇಂಡಿಯಾ ಮೈತ್ರಿಕೂಟದಲ್ಲಿ 24ಕ್ಕೂ ಹೆಚ್ಚು ಪಕ್ಷಗಳು ಇವೆ. ಆದರೆ ಪಕ್ಷಗಳ ನಡುವೆ ಸಮನ್ವಯ ಇಲ್ಲ ಎಂಬ ಟೀಕೆಯು ಈ ಮೈತ್ರಿಕೂಟದ ಕುರಿತಾಗಿ ಇದೆ.

Tags: