Mysore
29
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಜೈಲಿನಿಂದ ಬಿಡುಗಡೆಯಾದ ನಟ ಅಲ್ಲು ಅರ್ಜುನ್‌ ಹೇಳಿದ್ದೇನು?

ಹೈದರಾಬಾದ್‌: ಕಾಲ್ತುಳಿತ ಪ್ರಕರಣದಲ್ಲಿ ಬಂಧನವಾಗಿದ್ದ ತೆಲುಗು ನಟ ಅಲ್ಲು ಅರ್ಜುನ್‌ ಚಂಚಲಗುಡ ಸೆಂಟ್ರಲ್‌ ಜೈಲಿನಿಂದ ಇಂದು ಬಿಡುಗಡೆಯಾಗಿದ್ದಾರೆ.

ಪುಷ್ಪ-2 ಚಿತ್ರದ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಿಂದ ಓರ್ವ ಮಹಿಳೆ ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧವಾಗಿ ಅಲ್ಲು ಅರ್ಜುನ್‌ ಅವರನ್ನು ಪೊಲೀಸರು ಬಂಧಿಸಿ ನಾಂಪಲ್ಲಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ಬಳಿಕ ತೆಲಂಗಾಣ ಹೈಕೋರ್ಟ್‌ ಷರತ್ತು ಬದ್ಧ ಜಾಮೀನು ಮಧ್ಯಂತರ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು(ಡಿ.14) ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾಗಿ ತಮ್ಮ ನಿವಾಸವಾಗಿರುವ ಜುಬಿಲಿ ಹಿಲ್ಸ್‌ಗೆ ತೆರಳಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಬೆಂಬಲ ನೀಡಿದ ಎಲ್ಲರಿಗೂ ಹಾಗೂ ನನ್ನ ಎಲ್ಲಾ ಅಭಿಮಾನಿಗಳಿಗೂ ನಾನು ಧನ್ಯವಾದ ಸಮರ್ಪಿಸುತ್ತಿದ್ದೇನೆ. ಇನ್ನು ನನ್ನ ಬಗ್ಗೆ ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ. ನಾನು ಕ್ಷೇಮವಾಗಿದ್ದೇನೆ ಎಂದು ಹೇಳಿದ್ದಾರೆ.

ನಾನು ಕಾನೂನು ಪಾಲಿಸುವ ನಾಗರೀಕನಾಗಿದ್ದು, ಎಲ್ಲದಕ್ಕೂ ನಾನು ಸಹಕರಿಸುತ್ತೇನೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ನಾನು ಇನ್ನೊಮ್ಮೆ ಸಂತಾಪ ಕೋರುತ್ತೇನೆ. ಅದೊಂದು ದುರದೃಷ್ಟಕರ ಘಟನೆ. ಹಾಗಾಗಿ ನಾವು ಅವರ ಬಳಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.

 

Tags:
error: Content is protected !!