Mysore
30
few clouds

Social Media

ಭಾನುವಾರ, 15 ಫೆಬ್ರವರಿ 2026
Light
Dark

ಅಮೆರಿಕಾ ಪ್ರಯಾಣ ನಿರ್ಬಂಧ ಸಾಧ್ಯತೆ: ಭೂತಾನ್‌, ಪಾಕಿಸ್ತಾನ ಸೇರಿ 41 ರಾಷ್ಟ್ರಗಳಿಗೆ ನಿರ್ಬಂಧ ವಿಧಿಸಲು ಟ್ರಂಪ್‌ ಸರ್ಕಾರ ತೀರ್ಮಾನ

ವಾಷಿಂಗ್ಟನ್‌: ಹೊಸ ನಿಷೇಧದ ಭಾಗವಾಗಿ ಭೂತಾನ್‌, ಪಾಕಿಸ್ತಾನ ಸೇರಿದಂತೆ ವಿಶ್ವದ 41 ರಾಷ್ಟ್ರ ಪ್ರಜೆಗಳಿಗೆ ಅಮೆರಿಕಾದ ಪ್ರಯಾಣ ನಿರ್ಬಂಧ ವಿಧಿಸಲು ಡೊನಾಲ್ಡ್‌ ಟ್ರಂಪ್‌ ಸರ್ಕಾರ ತೀರ್ಮಾನಿಸಿದೆ.

ಅಮೆರಿಕಾವೂ 41 ರಾಷ್ಟ್ರಗಳನ್ನು ಮೂರು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಿದ್ದು, ಆ ದೇಶಗಳಿಗೆ ಅಮೆರಿಕಾ ಸರ್ಕಾರ ಜ್ಞಾಪನ ಪತ್ರವನ್ನು ಹೊರಡಿಸಿದೆ.

ಅಮೆರಿಕಾ ಪ್ರಯಾಣಕ್ಕೆ ನಿರ್ಬಂಧಿಸಿರುವ ದೇಶಗಳು ಯಾವ್ಯಾವು?

ಮೊದಲ ಗುಂಪಿನಲ್ಲಿ ಬರುವ ಅಫ್ಘಾನಿಸ್ತಾನ, ಕ್ಯೂಬಾ, ಇರಾನ್, ಸಿರಿಯಾ ಹಾಗೂ ಉತ್ತರ ಕೊರಿಯಾ ಸೇರಿದಂತೆ 10 ದೇಶಗಳ ಪೂರ್ಣ ವೀಸಾ ಅಮಾನತುಗೊಳಿಸಲಾಗುವುದು ಎಂದು ಹೇಳಿದೆ.

ಎರಡನೇ ಗುಂಪಿನಲ್ಲಿರುವ ಹೈಟಿ, ಲಾವೋಸ್‌, ಎರಿಟ್ರಿಯಾ, ಮಯನ್ಮಾರ್‌, ಹಾಗೂ ದಕ್ಷಿಣ ಸುಡಾನ್‌ ದೇಶಗಳು ಕೂಡ ಅಮಾನತುಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಯುಸ್‌ನ ಈ ನಿರ್ಧಾರದಿಂದ ಕೆಲ ವಿನಾಯಿತಿಗಳೊಂದಿಗೆ ಪ್ರವಾಸಿಗಳು, ವಿದ್ಯಾರ್ಥಿ ವೀಸಾಗಳು ಹಾಗೂ ಇನ್ನಿತರ ವಲಸೆ ವೀಸಾಗಳ್ಳುಳ್ಳ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ.

ಇನ್ನು ಮೂರನೇ ಗುಂಪಿನಲ್ಲಿರುವ ಭೂತಾನ್‌, ಪಾಕಿಸ್ತಾನ ಹಾಗೂ ಮಯನ್ಮಾರ್‌ ಸೇರಿದಂತೆ ಒಟ್ಟು 26 ದೇಶಗಳ ಸರ್ಕಾರಗಳು 60 ದಿನಗಳಲ್ಲಿ ನ್ಯೂನತೆಗಳನ್ನು ಆದಷ್ಟು ಬೇಗ ಪರಿಹರಿಸಬೇಕು. ಇಲ್ಲವಾದರೆ ಅಮೆರಿಕಾದ ವೀಸಾ ವಿತರಣೆಯನ್ನು ಭಾಗಶಃವಾಗಿ ಸ್ಥಗಿತಗೊಳಿಸುವುದನ್ನು ಪರಿಗಣಿಸಲಾಗುವುದು ಎಂದು ತಿಳಿಸಿದೆ.

Tags:
error: Content is protected !!