Mysore
33
few clouds

Social Media

ಸೋಮವಾರ, 02 ಮಾರ್ಚ್ 2026
Light
Dark

ಅಮೇರಿಕಾ-ಇಸ್ರೇಲ್‌ ಜಂಟಿ ದಾಳಿ: ಒಂದೇ ಬಾರಿಗೆ ಇರಾನಿನ 48 ನಾಯಕರು ಸಾವು

Donald J Trump

ಟೆಹರಾನ್:‌ ಇರಾನ್‌ ವಿರುದ್ಧ ಅಮೇರಿಕಾ ಹಾಗೂ ಇಸ್ರೇಲ್‌ ನಡೆಸಿದ ಜಂಟಿ ಮಿಲಿಟರಿ ಕಾರ್ಯಾಚರಣೆಯಲ್ಲಿ 48 ಇರಾನಿನ ನಾಯಕರು ಸಾವನ್ನಪ್ಪಿದ್ದಾರೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಾವು ಸಾಧಿಸುತ್ತಿರುವ ಯಶಸ್ಸನ್ನು ಯಾರೂ ಕೂಡ ನಂಬಲು ಸಾಧ್ಯವಿಲ್ಲ. 48 ನಾಯಕರು ಒಂದೇ ಹೊಡೆತದಲ್ಲಿ ಹೋಗಿದ್ದಾರೆ.

ಈ ಕಾರ್ಯಾಚರಣೆಯನ್ನು ಇರಾನ್‌ನ ನಾಯಕತ್ವ ಮತ್ತು ಮಿಲಿಟರಿ ಕಮಾಂಡ್‌ ರಚನೆಯ ವಿರುದ್ಧ ನಿರ್ಣಾಯಕ ಹೊಡೆತ ಎಂದು ಬಣ್ಣಿಸಿದ ಅವರು, ಇರಾನ್‌ ಮಾತುಕತೆ ನಡೆಸಲು ಬಯಸುತ್ತಿದೆ ಮತ್ತು ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

Tags:
error: Content is protected !!