Mysore
19
broken clouds

Social Media

ಬುಧವಾರ, 18 ಮಾರ್ಚ್ 2026
Light
Dark

ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ದಾಳಿ : ಇರಾನಿನ ಕ್ಷಿಪಣಿ ತಾಣ ನಾಶ

ಟೆಹ್ರಾನ್ : ಇರಾನ್ ಹಿಡಿತದಲ್ಲಿದ್ದ ಜಗತ್ತಿನ ಪ್ರಮುಖ ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ತೀವ್ರ ದಾಳಿ ನಡೆಸಿದೆ.

ಜಲಮಾರ್ಗದ ಬಳಿಕ ಇರಾನಿನ ಕ್ಷಿಪಣಿ ತಾಣಗಳನ್ನು ಹೊಡೆದುರುಳಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ. ಹಾರ್ಮುಜ್ ಜಲಸಂಧಿ ಬಳಿಯ ಇರಾನ್‌ನ ಕರಾವಳಿಯುದ್ದಕ್ಕೂ ಇದ್ದ ಕ್ಷಿಪಣಿ ತಾಣಗಳ ಮೇಲೆ ಅಮೆರಿಕ 5,000 ಪೌಂಡ್ ಬಂಕರ್ ಬಸ್ಟರ್ ಬಾಂಬ್‌ಗಳ ಮಹಾಮಳೆ ಸುರಿಸಲಾಗಿದೆ.

ನಿರ್ಣಾಯಕ ಜಲಮಾರ್ಗವನ್ನು ಮತ್ತೆ ತೆರೆಯುವ ಉದ್ದೇಶದಿಂದ ಅಮೆರಿಕ ಶಸ್ತ್ರಗಾರದಲ್ಲಿರುವ ಕೆಲವು ಶಕ್ತಿಶಾಲಿ ಬಾಂಬ್‌ಗಳ ದಾಳಿ ನಡೆಸಿದೆ. ಈ ತಾಣಗಳಲ್ಲಿರುವ ಇರಾನಿನ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳು ಜಲಸಂಧಿಯಲ್ಲಿ ಅಂತರರಾಷ್ಟ್ರೀಯ ಹಡಗು ಸಾಗಣೆಗೆ ಅಪಾಯವನ್ನುಂಟುಮಾಡಿದವು. ಹೀಗಾಗಿ, ಅವುಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಯುದ್ಧಕ್ಕೆ ಪ್ರತೀಕಾರವಾಗಿ, ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿತ್ತು. ಇದರಿಂದ ಹಲವು ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು ಶುರುವಾಯಿತು. ಪ್ರಮುಖ ಮಾರ್ಗವನ್ನು ಓಪನ್ ಮಾಡುವುದಕ್ಕಾಗಿ ಈ ಬಾಂಬ್ ದಾಳಿ ನಡೆದಿದೆ.

ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತಗೊಳಿಸಲು, ಈ ಪ್ರದೇಶದ ತೈಲ ರಫ್ತಿನ ಮೇಲಿರುವ ದಿಗ್ಬಂಧನ ಸಡಿಲಿಸಲು ಸಹಾಯ ಮಾಡುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದರು. ಆದರೆ, ನ್ಯಾಟೋ ಸೇರಿದಂತೆ ಅಮೆರಿಕದ ಮಿತ್ರರಾಷ್ಟ್ರಗಳು ಈ ಕರೆಯನ್ನು ತಿರಸ್ಕರಿಸಿದ್ದವು. ಜಗತ್ತು ನಮ್ಮ ಪ್ರಯತ್ನಗಳನ್ನು ಮೆಚ್ಚದಿದ್ದರೂ ಸಹ, ನಾವು ವಿಶ್ವದ ಒಳಿತಿಗಾಗಿ ಯುದ್ಧವನ್ನು ನಡೆಸುತ್ತಿದ್ದೇನೆ ಎಂದು ಟ್ರಂಪ್ ಒತ್ತಿ ಹೇಳಿದರು.

 

Tags:
error: Content is protected !!