ನವದೆಹಲಿ : ಪೂಜಾ ಖೇಡ್ಕರ್ ವಿವಾದದ ಬೆನ್ನಲ್ಲೆ ಕೇಂದ್ರ ಲೋಕಸೇವಾ ಆಯೋಗದ ( UPSC) ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ ನೀಡಿದ್ದಾರೆ. ಅವರ ಅಧಿಕಾರಾವಧಿ ೨೦೨೯ಕ್ಕೆ ಕೊನೆಗೊಳ್ಳಬೇಕಾಗಿತ್ತು. ಅದರೆ ೫ ವರ್ಷ ಅಧಿಕಾರದ ಅವಧಿ ಬಾಕಿಯಿರುವಾಗಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ರಾಜೀನಾಮೆಯನ್ನು ಈವರೆಗೂ ಅಂಗೀಕರಿಸಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿಷಯ ಮುನ್ನೆಲೆಗೆ ಬಂದ ನಂತರ UPSC ಸುತ್ತ ವಿವಾದಗಳು ಎದ್ದಿವೆ. ಈ ಪ್ರಕರಣಕ್ಕೂ ಸೋನಿ ಅವರ ರಾಜೀನಾಮೆಗೂ ಯಾವುದೇ ಸಂಬಂಧವಿಲ ಎನ್ನಲಾಗಿದೆ.
ಇನ್ನು ಪ್ರಖ್ಯಾತ ಶಿಕ್ಷಣ ತಜ್ಞ ಸೋನಿ ೨೦೧೭ ರ ಜೂನ್ ೨೮ ರಂದು ಆಯೋಗದ ಸದಸ್ಯರಾಗಿ ಅಧಿಕಾರವಹಿಸಿಕೊಂಡಿದ್ದರು. ೨೦೨೩ ರ ಮೇ ೧೬ ರಂದು UPSC ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕರಿಸಿದ್ದರು.



